ಜೀವನ ಬಹಳ ಸರಳ..
ಮುಂದಿನ ದಿನ ಹೇಗಿರಬಹುದು ಎಂಬ ಚಿಂತೆಗಿಂತ, ಕಳೆದ ಸುಖ ಸಂತಸದ ದಿನಗಳ ಸವಿ ನೆನಪಿನೊಂದಿಗೆ ,ಸೋತ ಅನುಭವದೊಂದಿಗೆ ಮುನ್ನಡೆಯೋಣ.
ಜೀವನ ನಾವೆಣಿಸಿದಂತೆ ಇರಬೇಕೆಂದು ಬಯಸುವುದಕ್ಕಿಂತ, ಬಂದಂತೆ ಎದುರಿಸಿ ಬಾಳುವ ಮನಸ್ಥಿತಿ ಬೆಳೆಸಿಕೊಳ್ಳೋಣ.
ನಿತ್ಯವೂ ಕಷ್ಟದ ಬದುಕು ಎಂದು ಎದೆಗುಂದಬಾರದು. ಕಷ್ಟದ ದಿನಗಳೆಂದರೆ ನೀವು ಸೋತಿದ್ದೀರಿ ಎಂದರ್ಥವಲ್ಲ. ನೀವು ಗೆಲುವಿನ ದಾರಿಯಲ್ಲಿ ನಡೆಯುತ್ತಿದ್ದೀರಿ ಎಂದೇ ಭಾವಿಸಬೇಕು.
ಗೆಲುವಿನ ದಿನಗಳು ಹತ್ತಿರ ಅಥವಾ ದೂರವೆನ್ನುವುದರ ಬಗ್ಗೆ ನಿರಾಶೆ, ಸಂಶಯ ಬಿಟ್ಟಷ್ಟೂ ಒಳಿತು.
ಜೀವನ ಬಹಳ ಸರಳ..ಎಲ್ಲರೊಂದಿಗೆ ನಗುತ್ತಾ, ಹೊಂದಿಕೊಂಡು ಸರಳವಾಗಿ ಜೀವನ ನಡೆಸಿದರೆ ಅದೇ ಸ್ವರ್ಗ.
ಆದರೆ ಕಷ್ಟವಿರುವುದು ಎಲ್ಲಿ ಮತ್ತು ಜೀವನದ ತೊಡಕು ಯಾವುದು?... ಅದೇ ಸರಳವಾಗಿ ಇರಲು ಒಪ್ಪದ ಮನಸ್ಸು.
Comments
Post a Comment