Posts

Showing posts from December, 2020

ಊರುಗೋಲು..

  ಹುಟ್ಟಿದ ಜೀವಕ್ಕೆ ಎದ್ದು ನಿಂತು ನಡೆಯಲು ಬೇಕು... ಪರಮಾತ್ಮನ ಕೃಪೆ. ಜೀವನದುದ್ದಕ್ಕೂ ಬೇಕು, ಕೈ ಹಿಡಿದು ನಡೆಸಲು ಭಗವಂತನೆಂಬ ಊರುಗೋಲು. ಆದರೂ, ನಮ್ಮ ಕೋರಿಕೆ ಒಂದೇ ಇರಲಿ ಭಗವಂತನಲ್ಲಿ......  ಮುಪ್ಪಿನಲಿ ಕರುಣಿಸದಿರು "ಊರುಗೋಲು" ಹಿಡಿದು ನಡೆಯುವ ಭಾಗ್ಯ..  ಬದಲಿಗೆ ಕೈ ಹಿಡಿದು ಕರೆದುಕೊಂಡು ಹೋಗು ನಿನ್ನೊಡನೆ, ನಿನ್ನ ಮನೆಗೆ..

ಆಸೆಗಳು

 ನಮ್ಮ ಆಸೆಗಳು ನಮ್ಮನ್ನು  ಆಳುವಂತಾಗಬಾರದು. ಆಸೆಗಳು ಮೈಗೆ ಮೆತ್ತಿ ಕೊಳೆತು ಜೀವನ ನಾಶವಾಗಬಾರದು...!!!  ಅಸೆಗಳು ಜೀವಿಗಳ ಜೀವನದಲ್ಲಿ ಸಹಜ. ಅದು ಹಿಮದ ಮೇಲೆ ಜಾರಿದಂತೆ , ಸುಂದರವಾಗಿ, ಮೈಗೆ ಅಂಟದೇ ಜಾರುತ್ತಿರಬೇಕು. ಆಸೆ ಜೀವಕ್ಕೆ ಅಂಟದೇ, ಜೀವನದಲ್ಲಿ ಅನುಭವಿಸಿ, ದಿನ ಕಳೆಯುವಂತಿರಬೇಕು...!!!  ಆಸೆಯೂ ಇರಬೇಕು, ಇತಿ ಮಿತಿಯಲಿ. ಅದೇ ಜೀವನವಲ್ಲ. ಜೀವನದ ದಾರಿಯಲ್ಲಿ, ಕ್ಷಣಿಕ ಆಸ್ವಾದನೆಯಷ್ಟೆ ...!!! 

ದೇವನ ಪಗಡೆಯಾಟ

  ನಾವೆಲ್ಲ ಇಂದು ಹುಟ್ಟಿ... ನಾಳೆ ಎನ್ನುವ ದಿನ ಇಲ್ಲಿಯೇ ಸಾಯುವ ಯಕಶ್ಚಿತ್ ಪ್ರಾಣಿಗಳು. ನಾವೆಲ್ಲರೂ ದೇವನ ಪಗಡೆಯಾಟದ ಭಾಗ. ಆಟಗಾರ ಆಟವಾಡುವಾಗ  ರಾಜನೋ, ಕಾಲಾಳೋ,ಕುದುರೆ ಎಂದು ಚೆಸ್ ಬೋರ್ಡ್ ಮೇಲಿರಿಸಿ ಸಂಭೃಮಿಸುವುದು ಸತ್ಯವೇ...ಆದರೆ ಅದು ಆಟಗಾರನ ಕ್ಷಣಿಕ ಆಟದ ಭಾಗವಷ್ಟೆ. ಒಮ್ಮೆ ಆಟ ಮುಗಿಯುತ್ತಿದ್ದಂತೆ ಆಟಗಾರ, ರಾಜ ಕಾಲಾಳುಗಳನ್ನೆಲ್ಲಾ , ಒಂದೇ ಡಬ್ಬದಲ್ಲಿ ಸೇರಿಸುತ್ತಾನೆ ಸಮಾನ ಬೆಲೆಯ ನೆಲೆಯಲ್ಲಿ.

ಸತ್ಯ..

 ಸತ್ಯ ಮುಚ್ಚಿಟ್ಟಸ್ಟೂ ಮಂಕಾಗುತ್ತದೆ. ಮಿಥ್ಯೆ ಹೊರಗಡೆದಷ್ಟೂ ಶುದ್ಧವಾಗುತ್ತದೆ. ಸತ್ಯ ಒಪ್ಪದ ಮನಸ್ಸು, ಕ್ಷೋಭೆಯಿಂದ ಬಡಬಡಿಸುತ್ತವೆ,ಅರೆ ಬೆಂದ ಅನ್ನ ತಿಂದು, ಗಂಟಲಲ್ಲಿ ಸಿಕ್ಕಿ ಒದ್ದಾಡಿದಂತೆ. ಸತ್ಯ ಒಪ್ಪುವುದು ಅಷ್ಟು ಸುಲಭವಲ್ಲ. ಸತ್ಯ ಅರಗಿಸಲು ಕಷ್ಟ, ಮಥಿಸಿ ಮನನ ಮಾಡಲು ಸಾವಧಾನ ಬೇಕು...ಮನಸ್ಸಿಗೆ ನೆಮ್ಮದಿ ಬೇಕು. ಸತ್ಯ ಸಾಯದು,...ಅರಗಿಸಲಾಗದ ಅತೃಪ್ತ ಆತ್ಮಗಳ ಬಡಬಡಿಕೆಗೆ  ಸತ್ಯ ನಾಶವಾಗದು..ಸತ್ಯವನ್ನು ಸಂಶೋಧಿಸಿ, ಸದಾ ಅರಗಿಸಿಕೊಳ್ಳುವ ಪ್ರತಿಭೆ ಮತ್ತಷ್ಟು ಬೆಳೆಯುತ್ತದೆ......

ಸೊನ್ನೆಯಿಂದ ಜೀವನ

 ನಿಮ್ಮ ಜೀವನ ಆರಂಭವಾಗುವುದು ಸೊನ್ನೆಯಿಂದ. ಜೀವನದಲ್ಲಿ ಸಿಗುವ ಪ್ರತಿಯೊಬ್ಬರ ಹಿಂದೆ ನೀನು ನೀನಿದ್ದರೆ, ಅವರು ನಿನ್ನ ಮುಂದಿದ್ದು ನಿನ್ನ ಮೌಲ್ಯವೇರುತ್ತಾ ಹೋಗುತ್ತದೆ. ಜೀವನದಲ್ಲಿ ಕೆಲವೊಮ್ಮೆ ಸೊನ್ನೆ ಮೌಲ್ಯದ ವ್ಯಕ್ತಿಗಳೂ ಸಿಗುತ್ತಾರೆ.ಅವರನ್ನೂ ನಿನ್ನ ಮುಂದೆ ಇಡು. ಅದರಿಂದ ನಿನ್ನ ಮೌಲ್ಯ ಕಡಿಮೆಯಾಗದು...ನಿನ್ನ ವರ್ಧನೆಗೆ ಅದು ಸಹಾಯಕವಾಗುವುದಂತೂ ಸತ್ಯ. Be zero, add on friends irrespective of their value. Feel you are least, so your value will continuously add on.

"ಕರ್ಮ" ಭೂಮಿ ಭಾರತ

  ಅಖಂಡ ಭಾರತವು ಒಂದು "ಕರ್ಮ" ಭೂಮಿ. ಇಲ್ಲಿನ ಮಣ್ಣಿನ ಮೂಲ ಬೇರು "ಹಿಂದೂ" ಧರ್ಮವೆಂಬ ಕರ್ಮ ಆಧರಿದ ಜೀವನ ಕ್ರಮ. ಈ ಜೀವನ ಪದ್ಧತಿಯಲ್ಲಿ ,"ಜಾತಿ-caste" ಎಂಬ ಪದವೇ ಇಲ್ಲ.ಎಲ್ಲರೂ ಸಮಾನರು,ಆದರೆ ಅವರು ಅನುಸರಿಸುವ ಕರ್ಮ/ಕಾರ್ಯಗಳಿಂದ ನಾಲ್ಕು ವಿಭಾಗದಲ್ಲಿ ಗುರುತಿಸಲ್ಪಡುತ್ತಿದ್ದರು.ಅವುಗಳನ್ನು ವರ್ಣಗಳೆಂದು ಗುರುತಿ ಸಲ್ಪಡುತ್ತಿತ್ತು.ಎಲ್ಲವೂ ಮುಕ್ತಿಗಾಗಿ, ದೇವರ ಅನುಗ್ರಹಕ್ಕಾಗಿ ಆರಿಸಿಕೊಂಡ ಗೌರವಯುತ  ಮಾರ್ಗಗಳಾಗಿದ್ದವು. "ವಸುದೈವ ಕುಟುಂಬ"ವೆಂಬ ಪರಿಕಲ್ಪನೆ ಇತ್ತು.ಯಾರೂ ಯಾವ ಸಮಯದಲ್ಲಿಯೂ ತನ್ನ ಆಯ್ಕೆಯ "ಕರ್ಮ"ದಲ್ಲಿ ಮುಂದುವರಿಯುವ ಮುಕ್ತತೆ ಇತ್ತು. ಆದರೆ ಯಾವಾಗ ಬ್ರಿಟಿಷರು, ಪೋರ್ಚುಗೀಸರು ಈ ನೆಲದಲ್ಲಿ ಕಾಲಿಟ್ಟರೋ, ಅವರು ತಮ್ಮ ಲಾಭಕ್ಕಾಗಿ, ವರ್ಣ ವ್ಯವಸ್ಥೆಯನ್ನು ತಿರುಚಿ, ಅವರ ಅನುಕೂಲಕ್ಕಾಗಿ ಜಾತಿ ವ್ಯವಸ್ಥೆಯೆಂಬಂತೆ ನಿಧಾನವಾಗಿ ಮಾರ್ಪಡಿಸಿದರು. ಮೇಲ್ವರ್ಗ ,ಕೆಳವರ್ಗವನ್ನು ಸೃಷ್ಟಿಸಿ ಅದನ್ನು ಜಾತಿ ಹೆಸರಲ್ಲಿ ಶ್ರೇಣೀಕೃತಗೊಳಿಸಿದರು. "Casta" ಎನ್ನುವ ಪೋರ್ಚುಗೀಸರ "ರಕ್ತ ಸಂಬಂಧ" ಎನ್ನುವ ಪದವನ್ನು, ಜಾತಿಯ ವ್ಯವಸ್ಥೆಯ ಅರ್ಥದಲ್ಲಿ ರೂಪಾಂತರಗೊಳಿಸಿ, ನಮ್ಮ ಜನರಲ್ಲಿ ಭೇದ ,ದ್ವೇಷದ ಕಂದಕ ಸೃಷ್ಟಿಸಿ ತಮ್ಮ ಪಿತೂರಿಯ ಭಾಗವಾಗಿಸುವಲ್ಲಿ ಸಫಲತೆ ಕಂಡರು. ಇದರ ಭಾಗವಾಗಿ, ಆಗಿನ ಕೆಲವು ಮುಂದುವರಿದ ಜನಾಂಗದ ಜನರನ್ನೆ ಆಯ್ದು, ಅವರ ...

ಮೌನದ ತೊಳಲಾಟ

 ನನ್ನತನದ ಲಾಲಸೆ,ಪ್ರಾಪಂಚಿಕ ಸ್ವಾರ್ಥವೆನಿಸಿದರೆ...ಸತ್ಯ. ಪ್ರತಿಯೊಂದು ಆತ್ಮವೂ ತನ್ನ ಅಸ್ತಿತ್ವಕ್ಕಾಗಿ ನಡೆಸುವ ನಿರಂತರ ಹೋರಾಟವೇ "ಜೀವನ". ಜೀವನವೆನ್ನುವುದು, "ಆತ್ಮ" ಮತ್ತು ಭೌತಿಕ "ದೇಹ"ದ ಕೂಡು ನಡೆ. ಅಂದರೆ ದೇವನೊಲುಮೆಯ ದೇಹ, ಆತ್ಮಗಳೆ ಮುಖ್ಯ ಮತ್ತು ಪೂರ್ವ ನಿರ್ಧರಿತ ಎಂದಿರುವಾಗ.. ಮತ್ತೇಕೆ ಬವಣೆ?  ಮನಸ್ಸಿನಾಣತಿಯಂತೆ ನಡೆ, ಪ್ರತಿಫಲದ ನಿರೀಕ್ಷೆ ಬಿಟ್ಟು. ಬೇರೆ ಆತ್ಮಗಳ ನಡುವೆ ಸ್ಪಂದಿನೆಯಿರಲಿ, ಆದರೆ ಬೇರೆ ಆತ್ಮಗಳ ಮೇಲಿನ ವ್ಯಾಮೋಹ ನಮ್ಮೆಲ್ಲಾ ದುಃಖದ ಮೂಲ. ಆತ್ಮ ಪರಮಾತ್ಮನ ಅಂಶವಾಗಿರುವಾಗ,ದೇವನೇ ಆ ಆತ್ಮಗಳ ನಿರ್ಧೇಶನ ಮಾಡುತ್ತಿರುವಾಗ, ನಿನ್ನಿಂದ ಏನಾದೀತು ಇತರರ ಆತ್ಮೋದ್ಧಾರ? ೨)ಅಂತರಂಗದ ಮಂಥನದ ಉತ್ಪತ್ತಿ "ಮೌನ" ವಾದರೆ, ಜೀವನದ ಭವಿಷ್ಯದ ನಡೆಯ, ದಾರಿ ಹುಡುಕುವ ಕ್ಷಮತೆ ವೃದ್ಧಿಸೀತು. ಮೌನದ ತೊಳಲಾಟವೇ, ಉಕ್ಕಿ ಆಂತರ್ಯದ ಬೇಗೆ,ಮನಸ್ಸಾಗರದ ದೈತ್ಯ ಅಲೆಗಳ ಉಗಮದ ಜ್ವಾಲಾಮುಖಿಯಾದರೆ, ಎಲ್ಲವೂ ಪ್ರಯಳ ನಾಶದ ಹಾದಿ.

ಜೀವನದ ಸಂತಸ

  ಬೆಳದಿಂಗಳ ಮಧ್ಯದ ತಂಗಾಳಿ,ಮನವರಿವ ಹೃದಯಗಳ ನಸು ನಗು ಸಾಲದೆ ಜೀವನದ ನೆಮ್ಮದಿಗೆ? ಜಗ ಜಗಿಪ ಕೃತಕ ದೀಪಗಳು  ಉದ್ದಿಪನಗೊಳಿಪ, ಕ್ಷಣಿಕ ಅತಂತ್ರ ಸ್ಥಿತಿಗಳೇ ಮನದ ಅಸ್ಥಿರತೆಯ ಬೀಜವಾಗದಿರಲಿ. ಮನೋಲ್ಲಾಸವೇ ಮುಖ್ಯ ,ಕಳೆವ ದಿನಗಳಿಗೆ. ಕೃತಕ,ಕೃತಿಮಗಳು ಅಗ್ನಿ ಶರಗಳಾಗಿ ಚುಚ್ಚಿ, ನೆಮ್ಮದಿ, ಸಂತಸವ ದಹಿಸುತ್ತಾ ,ನರಕದೆಡೆಗಿನ ದಾರಿ ಪಲಕವಾಗದಿರಲಿ. ಪ್ರಸ್ತುತ ಜೀವನದ ಸಂತಸ, ನೆಮ್ಮದಿಯುತ ಕಳೆವ ದಿನಗಳೆ, ಮುಂದಿನ ಸವಿ ನೆನಪುಗಳ ಆಗರವಾಗಿ, ಅಂತಿಮ ದಿನಗಳ ಸುಂದರ ಬದುಕಿನ ತಳಹದಿಯಾಗಲಿ.

ದೂರ ಪಯಣ ಹಾದಿ ..

 ಮನುಷ್ಯನ ಸುಖ ಕಷ್ಟಗಳೆನ್ನುವುದು, ಲಾಭ ನಷ್ಟಗಳ ಲೆಕ್ಕಾಚಾರ . ಸಾಮಾನ್ಯವಾಗಿ ಮನುಷ್ಯನ ಆಲೋಚನೆಯಂತೆ ಇವುಗಳು ಸಮಾನುಪಾತವಾಗಿರುತ್ತವೆ. ಬಾಹ್ಯ ತಿಳುವಳಿಕೆಗೆ ಹೌದೆಂದು ಭೃಮಿಸಿದರೂ, ವಾಸ್ತವವಾಗಿ ಅವು ಒಂದಕ್ಕೊಂದು ವಿಲೋಮಾನುಪಾತವಾಗಿರುತ್ತದೆ. ಅಂದರೆ ಆರ್ಥಿಕ ಮತ್ತು ಭೌತಿಕ ಲಾಭವೆನ್ನುವುದು ನೇರವಾಗಿ ಮಾನಸಿಕ ಹಾಗೂ ದೈಹಿಕ ಪ್ರತಿಕೂಲಗಳನ್ನು, ಅರಿವಿಲ್ಲದಂತೆ ಹೇರುತ್ತದೆ. ಆದರೆ ಕಷ್ಟ ಎನ್ನುವಲ್ಲಿ ಮನಸ್ಸನ್ನು ಒರೆಗೆ ಹಚ್ಚಿ,ಮಾನಸಿಕ ಹಾಗೂ ದೈಹಿಕ ಚಟುವಟಿಕೆಗೆ ಪ್ರೇರೇಪಿಸುತ್ತದೆ...  ಈ ಹೋರಾಟದ ಪ್ರತಿ ಸಫಲತೆಯೂ,ಒಂದು ಮಾನಸಿಕ ಸಂತಸ ಮತ್ತು ಇನ್ನಷ್ಟು ಚಟುವಟಿಕೆಗೆ ಅನುವು ಮಾಡಿಕೊಡುತ್ತದೆ. ಇದುವೇ ಮನುಷ್ಯನ ಆರೋಗ್ಯದ, ನೆಮ್ಮದಿಗೆ ತಳಹದಿ ಆಗುತ್ತದೆ. ಅದನ್ನೆ ಕಾಯಕವೇ ಕೈಲಾಸ ಎಂದು ಬಣ್ಣಿಸಿರುವುದು. ಖಾಲಿಯಾದ ಮನಸ್ಸು ಮತ್ತು ದೇಹ, ಭೂತಗಳ ವಾಸ ಸ್ಥಾನ. ಹೊತ್ತು ಸಾಗುವ ಮೂಟೆ, ಬೆವರಿಂದ ಕಣ್ಣೀರ ಸುರಿಸೀತು...ಕಣ್ಣೀರ ಪನ್ನೀರ ಶುದ್ಧದಿಂದಲಿ ದೃಷ್ಟಿ ಸ್ಪಷ್ಟತೆಯೆ ದೂರ ಪಯಣ ಹಾದಿ ಸುಗಮವಾದೀತು.  

ಕರ್ಮ..

 ಜೀವನದಲ್ಲಿ ನಮ್ಮ ಕಾರ್ಯ ಗಳೆಲ್ಲಾ ಸಫಲವಾಗಬೇಕೆಂದಿಲ್ಲ. ಸಫಲವಾದ ಕಾರ್ಯಗಳೆಲ್ಲಾ ಒಳ್ಳೆಯದೇ ಆಗಬೇಕೆಂದಿಲ್ಲ. ನಾವು ಮಾಡುವ ಕಾರ್ಯ ನಮ್ಮ ಆತ್ಮ ಒಪ್ಪುವಂತಿರಬೇಕು. ನಮ್ಮ ಜೀವನ ಧರ್ಮವನ್ನು ಪ್ರತಿಬಿಂಬಿಸುವಂತಿರಬೇಕು. ಫಲಾಫಲಗಳ ನಿರೀಕ್ಷೆ ಇರದೇ ಸಾತ್ತ್ವಿಕವಾಗಿರಬೇಕು. ಬಯಕೆ ಇಲ್ಲದ, ಧರ್ಮಯುತ ಕರ್ಮ, ಶಕ್ತಿದಾಯಕ ಹಾಗೂ ಭಗವಂತನ ಕೃಪೆಯ ಭಾಗವಾಗುತ್ತದೆ.

ನಿರಂತರ ಸತ್ಯ.

 ಜೀವನದ ಸುಖ, ಕಷ್ಟಗಳನ್ನು ತುಲನಾತ್ಮಕವಾಗಿ ನೋಡಬೇಡಿ.  ಸಂತಸ, ಸಂಕಷ್ಟಗಳು ಭಾಗ್ಯ,ಬವಣೆಗಳು ಮೇಲು,ಕೀಳುಗಳು ಬಡತನ,ಸಿರಿತನಗಳು ಸೌಭಾಗ್ಯ, ದುರ್ಲಭಗಳು.... ಜೀವನದ ತುಲಾ ಮಾಪನದ ಸಮಷ್ಟಿಯಲ್ಲಿ ಸಮತೋಲಿತ. ಒಂದು ಕಡೆ ಭಾರವೆನಿಸಿದರೆ ಅದು ನಂತರದಲ್ಲಿ ಕಡಿಮೆಯಾಗಿ, ಇನ್ನೊಂದು ಕಡೆ ಸರಿವ ಸೂಚನೆಯಷ್ಟೆ. ಸಮ ಚಿತ್ತ, ಸಮ ಭಾವ...ನಿರಂತರ ಸತ್ಯ.

ಖುಷಿ

 ನಿನ್ನ ಅಸಹಾಯತೆ ಸಮಾಜದ ಮುಂದಿಡಬೇಡ.... ಅದರ ದುರುಪಯೋಗ ಮತ್ತು ಶೋಷಣೆ ಮಾಡುವ ಹತ್ತಾರು ಜೀವಿಗಳು ನಿನ್ನ ಸುತ್ತ ಕಾಯುತ್ತಿರುತ್ತವೆ...ಹಾಗೆಯೇ ನಿನ್ನ ನಿರ್ಧಿಷ್ಟ ವಿಷಯದ ಪ್ರಭಲತೆಯನ್ನು ಜನರಿಗೆ ತಿಳಿಸುವಲ್ಲಿಯೂ ಹಿಂಜರಿಕೆ ಬೇಡ. ಅದು ನಿನಗೆ ಮತ್ತು ನಿನ್ನ ಸುತ್ತಲಿನವರಿಗೆ ರಕ್ಷಣೆಯ ಕವಚ ನೀಡುತ್ತದೆ.....   ಜೀವನದಲ್ಲಿ ಖುಷಿ ಹಂಚುವುದೂ ಒಂದು ಧನಾತ್ಮಕ ಕಲೆ. ಮನಸ್ಸಿನ ಸಂತೃಪ್ತಿಯನ್ನು ಮಾತ್ರ ಹೊರಗೆಡಹಿ, ಇತರರೂ ಅದನ್ನು ಗ್ರಹಿಸಿ,ಅದರಿಂದ ಧನಾತ್ಮಕವಾಗಿ ಪ್ರೇರಣೆಗೊಂಡರೆ, ಇಡೀ ಸಮಾಜ ಸ್ವಾಸ್ಥ್ಯವಾಗಿರುತ್ತದೆ. ಎಷ್ಟೋ ಮನೆಗಳು,ಮನಗಳು ಸುಖ, ಸಂತಸದ ನೆಮ್ಮದಿ ಯ ಬಾಳ್ವೆ ಪಡೆಯಬಹುದು. #ಎಲ್ಲರೂ ಖುಷಿ ಹಂಚಿ,ಖುಷಿ ಖುಷಿಯಂಗೆ ಇರಿ.

ಅನಾಥ..

 ನನ್ನದೂ ಒಂದು ರಾಜ್ಯ. ನನ್ನದೇ ರಾಜ್ಯದಲ್ಲಿ ನಾನೊಬ್ಬ ಅನಾಥ. ಕೈ ಹಿಡಿದು ನಡೆಸುವವರಿಲ್ಲ, ಬೇಸರವಿಲ್ಲ. ನಾನು ಕುಂಟುತ್ತಾ ನಡೆಯುವುದನ್ನೂ ನೋಡಿ ನಗುವ ಜನರ ಮಧ್ಯೆ ನಾನು ತೆವಳುತ್ತಿರುವೆ. ಆದರೂ ಮನಸ್ಸು ಅದನ್ನು ಗಮನಿಸುತ್ತಿಲ್ಲ. ನಾನು ಅದನ್ನು ಗಮನಿಸಿದರೆ ನನಗೆ ಲಾಭವಿಲ್ಲ ಅಥವಾ ಅನುಕಂಪವನ್ನು ಆಶಿಸುವ ಮನಸ್ಸು ಉಳಿದಿಲ್ಲ. ನಾನೂ ಬಡವನೆ ಆದರೆ ತನ್ನ ಬೆನ್ನಿಗೆ ನನ್ನಜ್ಜ ಅದೇನೊ ಬೇರೆಯವ ಓದದ್ದು ಓದಿದ್ದ ಎಂಬ ಮೊಹರು. ಆ ಕಾರಣವೇ ನಾನು ಬಡವನಲ್ಲ. ನಾನೊಬ್ಬ ,ಇನ್ನೊಬ್ಬರನ್ನು ತುಳಿದ ಧೂರ್ತನೆಂಬ ಹಣೆ ಪಟ್ಟಿ ಬೇರೆಯವರಿಂದ ಬಿಗಿಸಿಕೊಂಡ ಗರ್ವಿ. ತನ್ನ ಅಜ್ಜ ಓದಿದ್ದು ಅದ್ಯಾವುದೊ ಗೀತೆಯಂತೆ,ವೇದವಂತೆ. ಅದೇ ನಿತ್ಯವೂ ನನ್ನ ವಧೆಗೆ ಈಗ ಎಲ್ಲರ ಬಾಯಲ್ಲಿನ ಗೀತೆ. ನನ್ನಜ್ಜ,ಮುತ್ತಜ್ಜ ಯಾರಾದರೂ ರಾಜನಾಗಿದ್ದನಾ ಎಂದು ಹುಡುಕಿದೆ. ದೊರಕ್ಕಿದ್ದು ಬಡತನದ ಅರೆಹೊಟ್ಟೆ. ಕೊಂದು ತಿಂದವನಾ ಎಂದರೆ ಏನೂ ತಿನ್ನದ ಹುಲ್ಲೆ. ತಟ್ಟನೆ ನೆನಪಾಯಿತು. ಹುಲಿಗೆ ಹುಲ್ಲೆಯೆ ಆಹಾರ. ಹುಲಿಯೇ ಕಾಡಿನ ರಾಜ. ಕೊಂದು ತಿನ್ನುವ ಹುಲಿಗೆ ಬಡ ಹುಲ್ಲೆಯ ಮೇಲೆಕೆ ಸಿಟ್ಟು.. ಕಾರಣ ಹುಲ್ಲೆಯ ಓಟ. ತಾನು ರಾಜನಾದರೂ ಬೇಟೆಗೆ ಸುಲಭದ ಹುಲ್ಲೆಯಾದರೂ ,ಓಡಾಡಿಸಿ ಹಿಡಿದು ತಿನ್ನಲು ಸ್ವಲ್ಪ ಬೆವರು ಬೇಕಲ್ಲವೆ. ಹುಲ್ಲೆಯೂ ಹಾಗೆ ಓಡುವ ಬದಲು, ಗುಂಪಾಗಿ ಪ್ರತಿರೋಧ ಒಡ್ಡುವ ಶಕ್ತಿ, ದವಡೆ ಪಡೆದಿಲ್ಲ.  ಅದಕ್ಕಾಗಿ ಒಂದೊಂದು ಮರಿಯ ಬೆನ್ನತ್ತಿ ಬೇರ್ಪಡಿಸಿ ಕೊಲ್ಲುವ ಸುಲ...

ಆತ್ಮವಿಶ್ವಾಸ...

 ಸೋಲಿನ ಕಹಿ ಎನ್ನುವುದು ಸ್ವಲ್ಪ ದಿನ ಮಾತ್ರ. ಗೆಲುವಿನ ಹುಡುಕಾಟದಲ್ಲಿ ,ಚಿಕ್ಕ ಚಿಕ್ಕ ಯಶಸ್ಸು ಕಹಿಯನ್ನು ಮರೆಸುತ್ತದೆ. ಆದರೆ ಗೆಲುವಿನ ಅಮಲು, ಇಳಿಯಲು ಸಮಯ ತೆಗೆದುಕೊಳ್ಳುತ್ತದೆ. ನಿಜವಾಗಿಯೂ ಅದು ಸಮಯ ತೆಗೆದುಕೊಳ್ಳುವುದಿಲ್ಲ. ಯಶಸ್ಸಿನ ಮದ, ಸೋಲುವುದನ್ನು ಅರ್ಥೈಸುವುದನ್ನು ಬಿಡುವುದಿಲ್ಲ. ಪೂರ್ಣ ನೆಲಕ್ಕೆರಗಿದ ಮೇಲೆ... ಹತಾಶೆ, ತಿರಸ್ಕಾರ ನೋಡಿ, ಪುನಃ ಪುಟಿದೇಳುವ ಆತ್ಮವಿಶ್ವಾಸವನ್ನೇ ಕೊಂದಿರುತ್ತದೆ. 

ನಂಬಿಕೆ ..

  ಜೀವನ ಬದಲಾದಂತೆ ನಮ್ಮ ಪ್ರಬುದ್ಧತೆ ಮತ್ತು ಪ್ರಾಮುಖ್ಯತೆ ಬದಲಾವಣೆ ಆಗುತ್ತದೆ.. ಆದರೆ ನಮ್ಮ ಮೇಲೆ ಬೇರೆಯವರಿಟ್ಟ ನಂಬಿಕೆ ಬದಲಾಗದಂತೆ ಎಚ್ಚರಿಕೆ ಬೇಕು.

ಚಿಟ್ಟೆ..

  ಚಿಟ್ಟೆ... ಇಷ್ಟೊಂದು ಸುಂದರ ತನುವ ಹೊಂದಿ,ಬಣ್ಣ ಬಣ್ಣದ ಲಲಿತಾಂಗಿ ನೀನೇಕೆ ಅಲ್ಲಲ್ಲಿ ಅಲೆಯುವೆ ?. ಆ ನೀಳ ಸೂಕ್ಷ್ಮ ಆಘ್ರಾಣ ಹೊತ್ತು ಅಲೆದು, ಮಧುವ ಹೀರುವ ನೆವದಿ, ಯಾರದೋ ಜೀವೋತ್ಪಾದನೆಗೆ ಬದುಕ ಸವೆಸುತಲಿರುವೆ. ಜೀವನವೇ ಹೊಯ್ದಾಟ, ಅಲ್ಲಿಲ್ಲಿ ಅಲೆದಾಟ, ಲಾಭ ಪಡೆವವನ್ಯಾರೊ ಅಪರಿಚಿತ. ಆದರೂ ಲೋಕದ ಕಣ್ಣಿಗೆ "ಪಾತರಗಿತ್ತಿ". ಜೀವನವೇ ಹೀಗೆ , ಕಾಣುವ ಪರದೆಯ ಬಣ್ಣದ ಬದುಕಿಗೂ  ಪ್ರಪಂಚ ಗುರುತಿಸದ ಮತ್ತೊಂದು ಆಯಾಮವಿದೆ.  ಈ ಪತಂಗ/ ಚಿಟ್ಟೆ/ ಪಾತರಗಿತ್ತಿ... ಯಾರಾದರೇನು...ತನ್ನ ಹೀರುವಿಕೆಯಲ್ಲಿ ಎಷ್ಟೊಂದು ಸೂಕ್ಷ್ಮತೆ...

ಜೀವನ ಬಹಳ ಸರಳ..

 ಮುಂದಿನ ದಿನ ಹೇಗಿರಬಹುದು ಎಂಬ ಚಿಂತೆಗಿಂತ, ಕಳೆದ ಸುಖ ಸಂತಸದ ದಿನಗಳ ಸವಿ ನೆನಪಿನೊಂದಿಗೆ ,ಸೋತ ಅನುಭವದೊಂದಿಗೆ ಮುನ್ನಡೆಯೋಣ. ಜೀವನ ನಾವೆಣಿಸಿದಂತೆ ಇರಬೇಕೆಂದು ಬಯಸುವುದಕ್ಕಿಂತ, ಬಂದಂತೆ ಎದುರಿಸಿ ಬಾಳುವ ಮನಸ್ಥಿತಿ ಬೆಳೆಸಿಕೊಳ್ಳೋಣ. ನಿತ್ಯವೂ ಕಷ್ಟದ ಬದುಕು ಎಂದು ಎದೆಗುಂದಬಾರದು. ಕಷ್ಟದ ದಿನಗಳೆಂದರೆ ನೀವು ಸೋತಿದ್ದೀರಿ ಎಂದರ್ಥವಲ್ಲ. ನೀವು ಗೆಲುವಿನ ದಾರಿಯಲ್ಲಿ ನಡೆಯುತ್ತಿದ್ದೀರಿ ಎಂದೇ ಭಾವಿಸಬೇಕು. ಗೆಲುವಿನ ದಿನಗಳು ಹತ್ತಿರ ಅಥವಾ ದೂರವೆನ್ನುವುದರ ಬಗ್ಗೆ ನಿರಾಶೆ, ಸಂಶಯ ಬಿಟ್ಟಷ್ಟೂ ಒಳಿತು. ಜೀವನ ಬಹಳ ಸರಳ..ಎಲ್ಲರೊಂದಿಗೆ ನಗುತ್ತಾ, ಹೊಂದಿಕೊಂಡು ಸರಳವಾಗಿ ಜೀವನ ನಡೆಸಿದರೆ ಅದೇ ಸ್ವರ್ಗ. ಆದರೆ ಕಷ್ಟವಿರುವುದು ಎಲ್ಲಿ ಮತ್ತು ಜೀವನದ ತೊಡಕು ಯಾವುದು?... ಅದೇ ಸರಳವಾಗಿ ಇರಲು ಒಪ್ಪದ ಮನಸ್ಸು.

ಮೇಘನೊಡ್ಡೋಲಗ

 ಮೋಡ ತುಂಬಿದ ಭಾನು ಚಂದಿರನ ಸುಳಿವಿಲ್ಲ ಮರೆಗೆ ಸರಿದಿಹನೆ ? ಕಾರ್ಮುಗಿಲ ಸೀಳಿ, ತುಂತುರ ಚೆಲ್ಲಿ  ಇಣುಕಬಾರದೇನೊ. ಆಗಸದಿ ಮೇಘರಾಜನ ಒಡ್ಡೋಲಗ, ಕಣ್ಸೆಳವ ಬೆಳಕಿನಾಟ. ತರಿಸದೇ ಇರಲಾರ ತುಂತುರು, ಕಾದ ಇಳೆಗೆ. ಮನದ ತಿಳಿಗೊಳದಿ ನಲಿಲಾಡುವ ಕನಸಿನ ಹಂಸ. ತೇಲುತಿಹ ಬಿಳ್ನಗುವ ದುಂಡು ಶಶಾಂಕ ಮೀಟದಿರನೆ ಇನಿದನಿ. ಮಿನುಗುತಿವೆ ನೂರಾರು ತಾರೆಗಳ ಮಾಲೆ. ಮಳೆಯ ಸಿಂಚನದಿ ತಂಪಾಯ್ತು ಧರೆ, ಹೊಸ ಹಸಿರು,ಜೀವಕಳೆ. ಮತ್ತೆ ಕಾಯುತಿವೆ ಮರಳಿ ಮೇಘನೊಡ್ಡೋಲಗ.

ಹೇಳಲಾರದ ಮಾತುಗಳು

 ಪ್ರತಿಯೊಬ್ಬರೂ ಅವರದೇ ಆದ ಹೇಳಬಾರದ, ಹೇಳಲಾರದ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆದ್ದರಿಂದ ಯಾರನ್ನೂ, ಅನಾವಶ್ಯಕವಾಗಿ ಒಮ್ಮಿಂದೊಮ್ಮೆಲೆ, ನಿಂದಿಸಲು, ಅವಮಾನ, ಅಪಮಾನಪಡಿಸಲು ಆಸ್ಪದಕೊಡಬಾರದು.  ಅಪನಂಬಿಕೆ, ನೆಮ್ಮದಿ ಮತ್ತು ಸೂಕ್ಷ್ಮ ಸಂಬಂಧಗಳನ್ನು ಕೊಲ್ಲುತ್ತದೆ. ಪ್ರಬುದ್ಧತೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಮತ್ತು ಅನಿವಾರ್ಯ.

ಖುಷಿ

 ನೀವಾಡುವ ಸಣ್ಣ ಸಣ್ಣ ಖುಷಿಯ ಮಾತುಗಳು, ಮುಖದ ಮೇಲಿನ ಮುಗುಳ್ನಗೆ, ಎಷ್ಟೊ ದುಃಖ ತುಂಬಿದ ಹೃದಯಕ್ಕೆ ಖುಷಿ ಮತ್ತು ಉತ್ಸಾಹ ಮೂಡಿಸಬಹುದು. ಇನ್ನೊಬ್ಬರ ಹೃದಯದ ನೋವು ಮರೆ ಮಾಡಲು ,ಸಂತಸ ತುಂಬಲು, ಒಂದೆರಡು ಸವಿ ಮಾತುಗಳು ಮಾತ್ರ ಸಾಕು. ನಾವೇಕೆ ಸಂತಸ ಹಂಚಿ, ಸಂತಸ ಪಡೆಯಬಾರದು. ಒಂದೆರಡು ಮಾತೇ ಹತ್ತಾರು ಗಂಟೆ ಮನಸ್ಸಿಗೆ ಮುದ ಕೊಡುವುದಂತಾದರೆ, ಜೀವನವನ್ನು ಖುಷಿ ಖುಷಿಯಿಂದ ಕಳೆಯಲು ಸುಂದರವಾದ ನೂರಾರು ಮಾತುಗಳೇ ಸಾಕು. ಪ್ರೋತ್ಸಾಹಕರ ನಾಲ್ಕು ನುಡಿ ,ಎಷ್ಟೋ ಜನರ ಬಾಳು, ಭವಿಷ್ಯ ಉಜ್ವಲಗೊಳಿಸಿದ ಉದಾಹರಣೆ ಇವೆ. ಮನ ಬಿಚ್ಚಿ ಸಂತಸ ಹಂಚುವುದು ಒಂದು ಕಲೆ...ನಾವೂ ರೂಡಿಸಿಕೊಳ್ಳೋಣ.

ಜೀವನ ಯಾತ್ರೆ

 ಜೀವನವನ್ನು ಯಾತ್ರೆಗೆ ಹೋಲಿಸಿದ್ದಾರೆ. ಅಂದರೆ ಎಲ್ಲಾ ಏಳು ಬೀಳುಗಳನ್ನು ದಾಟಿ ,ಮೋಕ್ಷದ ಗುರಿಯೆಡೆಗೆ ನಡೆಯುವುದೇ ಬದುಕು. ದಾರಿಯಲ್ಲಿ ಸಿಗುವ ಮುಳ್ಳು, ಸೌಂದರ್ಯ ಎಲ್ಲವನ್ನೂ ಲೆಕ್ಕಿಸದೇ ಸಾಗಬೇಕು. ನಾವು ಕಳೆದ ಸುಂದರ, ತೃಪ್ತಿಪೂರ್ಣ ದಿನಗಳು ಮಾತ್ರ ಸ್ಮೃತಿ ಪಟದಲ್ಲಿ ಉಳಿಯಲಿ.  ಮುಂದಿನ ದಿನದ ನಡೆಯ ಬಗ್ಗೆ ಗುರಿ ಇರಲಿ, ಭಯ ಬೇಡ. ನಡೆಸಿದಂತೆ, ದಾರಿ ಎದುರಾದಂತೆ ನಡೆವುದು ಅನಿವಾರ್ಯ.  ಭವಿಷ್ಯದ ದಾರಿ ಬಗ್ಗೆ, ಅನಾವಶ್ಯಕ ಹೆದರಿಕೆ ಬೇಡ. ಅದು ಮನಸ್ಸಿನ ಹುಮ್ಮಸ್ಸು ಕುಗ್ಗಿಸಬಹುದು. ಎದುರಿಸುವ ಸಂಕಲ್ಪ ಮತ್ತು ಅದನ್ನು ಸ್ವೀಕರಿಸಿ ಮುನ್ನಡೆವ ಮನೋಬಲ ಮಾತ್ರ ಇರಲಿ.

ಜೀವನದ ಓಟ...

 ಜೀವನದ ಓಟ... ನಮ್ಮ ಕಣ್ಣೆದುರೇ ಮಕ್ಕಳು ಆಟವಾಡಿ, ಕುಣಿದುದನ್ನು ಕಣ್ತುಂಬಿಕೊಂಡು, ಸಂತಸದ ದಿನ ಕಳೆದಾಗ ದಿನ ಚಿಕ್ಕದಾಗಿತ್ತು. ಹಾಗೆಯೇ ನಮ್ಮ ಪ್ರಾಯ ಕಳೆದದ್ದು ತಿಳಿಯಲೇ ಇಲ್ಲ. ಅದೇ ಮಕ್ಕಳು ದೊಡ್ಡವರಾಗಿ ,ರೆಕ್ಕೆ ಬಲಿತು ಹಾರುವುದನ್ನು , ಎಲ್ಲರಲ್ಲೂ ಹಂಚಿ ಸುಖಪಟ್ಟಾಗ ದಿನ ಕಳೆದದ್ದು ತಿಳಿಯಲೇ ಇಲ್ಲ. ವರುಷ ಚಿಕ್ಕದೆನಿಸಿತ್ತು. ಆದರೆ ಹಾರಿದ ಹಕ್ಕಿ ಬೇರೊಂದು ಗೂಡು ಕಟ್ಟಿ ಕಣ್ಣಿಗೆ ಕಾಣದಾಗ, ಪ್ರಾಯ ಮುಗಿ ಬಿದ್ದಿತು. ಕಣ್ಣು ಮಂಜಾಗಿ, ಮನಸ್ಸು ಮುಪ್ಪಿನೆಡೆ ಸಾಗಿ, ಕ್ಷಣವೂ ಯುಗವೆಸತೊಡಗಿತು. ಅದೇ ಜೀವನದ ಸುದೀರ್ಘ ಬಾಳ್ವೆ ಎಂಬ ಕಟು ಸತ್ಯ, ಮಬ್ಬಿನಲಿ ದೀಪವಾಗಿ  ಕುಕ್ಕುವುದು ತಪ್ಪಲಿಲ್ಲ

ಪ್ರಕೃತಿ

 ಖುಷಿ ಸಂತಸಕ್ಕೆ ಎಲ್ಲೆಲ್ಲೋ ಹುಡುಕುವ ನಾವು... ಇದನ್ನು ಆಸ್ವಾದಿಸುವ ಮನಸ್ಸನ್ನು ಒಪ್ಪುವುದಿಲ್ಲ... ಯಾಕೆ. ಸುಂದರ ಹಸಿರು...ಮಧ್ಯೆ  ಶುಭೃ ಮನಸ್ಸಿನ "ಕರಿಯ"... ಪ್ರಕೃತಿಯ ಸುಂದರ ಚಿತ್ತಾರಗಳನ್ನು ಆಸ್ವಾದಿಸುವ ಮನಸ್ಥಿತಿ ಬೆಳೆದರೆ ಮತ್ತ್ಯಾವುದು ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ.

ಹಾಲಾಡಿ ಹಬ್ಬ

  ಹಾಲಾಡಿ ಹಬ್ಬ ಅಂದ್ರೆ "ಮರ್ಲು ಚಿಕ್ಕು" ದೈದ್ಮನಿ ಗೆಂಡ. ಪ್ರತಿವರ್ಷ ಜನವರಿ ತಿಂಗ್ಳಂಗೆ ,ಗೋಳಿಕಟ್ಟಿ ಹಬ್ಬ ಆದ್ಮೆಲ್, ಆರೇಳ್ ದಿನಕ್ ಬಪ್ದ್. ಏಗಳಿಕೂ ಜನವರಿ 21 ರ ರಾತ್ರಿ ಗೆಂಡ, 22 ಕ್ಕೆ ಹಾಲಹಬ್ಬ. ರಾತ್ರಿ ಹಾಲಾಡಿ ಮ್ಯಾಳದ ಸೇವೆ ಆಂಟ. ಹಾಲಾಡಿ ಹೊಳಿ ಸೇತ್ಮಿ ಬದಿಯಂಗೆ  ರಸ್ತಿ ಆಚಿ ಈಚಿ ಬದಿಯಂಗೆ ಎರ್ಡ್ ದೈದ್ಮನಿ. ಪಡ್ಲಾಯಿ ಇಪ್ದ್ ಆದಿ ಮರ್ಲು ಚಿಕ್ಕು ಅಂಬ್ರ್. ಕೊಯ್ಕಾಡಿ ಕುದ್ರುಮನಿಯರ್ ಸಂಬಂಧ ಪಟ್ಟದಂಬ್ರ್. ಮತ್ತೊಂದು ಮೂಡ್ಲಾಯಿ ಬದಿಯಂಗಿಪ್ದ್ ಹಾಲಾಡಿ ಮನಿಯರದ್. ಈ ದೈವ, ಪಡ್ಲಾಯಿ ಬದಿಯಂಗಿಪ್ಪ ಖಾರ್ವಿ ಜನಾಂಗದವ್ರ್ ನಂಬಿದ್. ಅದ್ಕೆ ಈ ದೈದ್ಮನಿ ಗೆಂಡ ಅಂದ್ರೆ ಮೀನಿನ ವ್ಯಾಪಾರ ಜೋರ್. ಆಗಳಿನ್ ಕಾಲ್ದಂಗೆ ದೋಣಿ ಮ್ಯಾಲ್ ಮೀನ್ ತಂದ್ ಮಾರ್ತಿದ್ರ್.  ಗೆಂಡದ ದಿನ ರಾತ್ರಿ ಒಂದ್ಗಂಟಿ ಮ್ಯಾಲ್ ಗೆಂಡದ ಹೊಂಡಕ್ ಬೆಂಕಿ ಹಾಕಿ, ಗೆಂಡ ಮುಗ್ದ್ ಮ್ಯಾಲ್, ಬೆಳ್ಳಿ ಮೂಡ್ವತಿಕ್ ದಕ್ಕಿಬಲಿ ಸೇವೆ. ದೈದ್ಮನಿಗ್ ಹೋಪ್ಕೆ ಓಣಿ ರಸ್ತಿ. ಆದ್ರೂ ಸೇತ್ಮಿ ಬದಿಯಂಗೆ, ರಸ್ತಿಯಿಂದ್ ಇಳೂಕ್ ಮೆಟ್ಲ್ ಮಾಡಿ ಇಟ್ಟೀರ್. ಆದ್ರೂ ಇಳೂಕ್ ಕಷ್ಟ. ಆಗಳಿಕ್ ನಾವ್ ರಾತ್ರಿ ಹನ್ನೊಂದು ಗಂಟೆ ಮ್ಯಾಲ್,ದೈದ್ಮನಿ ಹೋಪ್ದ್. ಮರ್ತಪ್ಪಯ್ಯನ ಮ್ಯಾಮಿ ಮಿಠಾಯಿ ಅಂಗ್ಡಿ. ಬಾಬಯ್ಯ ಮತ್ತು ಬೊಕ್ಕಯ್ಯನ ಚಾ ತಿಂಡಿ ಹೋಟ್ಲ್. ಐಸ್ಕ್ಯಾಂಡಿ ಶೀನನ ಐಸ್ಕ್ಯಾಂಡಿ ಡಬ್ಬ. ಆ ರಾತ್ರಿ ಚಳಿಯಂಗೂ ಐಸ್ಕ್ಯಾಂಡಿ ತಿಂಬ್ದ್. ಕರ್ಗುಂಜಿ ಹಣ್ಣಿನ ಸೇಡ್ ತಕಂಡ್ ಕಪ್...

ಆಷಾಡ ಮಾಸ..

 ಆಷಾಡ ಮಾಸ... ಹೊರಗೆ ತಿರುಗಾಡಲು ಬಿಡದೆ ಕಾಡುವ 🏖️ಜಿರಾಪತಿ ಮಳೆ.⛈️ ಜೋರಾಗಿ ಬೀಸಿ, ಕರೆಂಟ್ ತೆಗೆವ ಬಿರು ಗಾಳಿ.🦂 ಹನಿ ಹನಿ ತಂಪಾಗಿ ಕಾಡುವ ತಂಡಿ ಹವೆ.👨‍❤️‍💋‍👨 ಆದರೂ ಯಾಕೆ ಹೋಗಬೇಕು,ಅರ್ಧಾಂಗಿ💔 ತವರಿಗೆ ?🤔 ಬೇಸರ ಪತಿಗೊಬ್ಬನಿಗೆ ಮಾತ್ರವಲ್ಲ ಸತ್ಯ.😭 ಮತ್ತೇಕೆ ದಂಪತಿಗಳಿಗೆ ಈ ವಿರಹ ಶಿಕ್ಷೆ?😪😪 ತಿಳಿದ ಹಿರಿಯರ ವಿಘ್ನ ಸಂತೋಷವೇಕೆ?🤔 ಅದಲ್ಲ ಕಾರಣ... ಈಗ ತಂಡಿಗೆ ಬೆಚ್ಚನೆಯ ಅಂಗಿ ಬಯಸಿದರೂ....😍 ಎಪ್ರಿಲ್ ಮೇ ಸುಡು ಬಿಸಿಲು..🌞 ನೀರಿನ ಬವಣೆ..😪 ಊರಲ್ಲೆಲ್ಲಾ ಹಬ್ಬ, ಸಂಭ್ರಮ... ಸೂತಕ 🌒ಕಾಡಿ ಸಂತೋಷ ಭಗ್ನವಾಗದಿರಲೆಂದು.

ದೇಶದ ಸ್ವಾತಂತ್ರ್ಯ

 ದೇಶದ ಸ್ವಾತಂತ್ರ್ಯ ಎನ್ನುವುದು, ಸ್ವೇಚ್ಛಾಚಾರಕ್ಕೆ ಸಿಕ್ಕಿದ ಅನುಮತಿಯಲ್ಲ. ತನ್ನ ಹೊತ್ತ ನೆಲ, ಅನ್ನ ಕೊಟ್ಟ ದೇಶ, ಸಂಸ್ಕಾರ ಸಂಸ್ಕೃತಿ ತುಂಬಿದ ಪರಿಸರವನ್ನು ಗೌರವಿಸಿ,  ಸಾಮರಸ್ಯದಿಂದ ಬದುಕು ಕಟ್ಟಿ ಕೊಳ್ಳುಲು ದೊರೆತ ಅವಕಾಶ. ಆದರೆ ಯಾವುದೋ ಲಾಭ, ಮೋಹ, ಸ್ವಾರ್ಥಕ್ಕಾಗಿ, ಹೆತ್ತು ಬೆಳಿಸಿದ ತಾಯ್ನೆಲವನ್ನು ,ಕರುಳ ಕುಡಿಯೇ ಧೂಷಿಸುವುದು, ನಿಂದಿಸುವುದು ಅಕ್ಷಮ್ಯ ಅಪರಾಧ.  ತಾಯಿಯ ಕರುಳ ಬಳ್ಳಿ ಹರಿದು ಹೊರಬಂದುದನ್ನೆ, ಸ್ವಾತಂತ್ರ್ಯ ದೊರಕಿದೆ ಎನ್ನುವ ನೆಲೆಯಲ್ಲಿ, ಮಂದ ಬುದ್ಧಿಯಿಂದ ಹೆತ್ತಬ್ಬೆಯ ಕರುಳಿಗೆ ಚೂರಿ ಹಾಕುಲು ಸಾಧ್ಯವಿಲ್ಲ. ತಪ್ಪು ಒಪ್ಪುಗಳ ನಡುವೆ ಹೊಂದಿ ಬೆಳೆದು, ಬೆಳೆಸುವ ಗುಣ ಬೆಳೆಸಿಕೊಂಡು, ದೇಶವನ್ನು ಕಟ್ಟಿ ಬೆಳೆಸುವುದು ಮಾತ್ರ ದೇಶ ಭಕ್ತಿಯ ಪ್ರತೀಕವಾಗುತ್ತದೆ.

ಆತ್ಮತೃಪ್ತಿ

 ಮನಸ್ಸಿನ ತೃಪ್ತಿ ಭಾವ ಎನ್ನುವುದು, ನಮ್ಮ ಇತಿ ಮಿತಿಯ ಪರಿಕಲ್ಪನೆಯಿಂದ ಸಾಧ್ಯ ... ದೇಹ ಎನ್ನುವುದು ದೇವನಿತ್ತ ರೂಪ..ಅದರಲ್ಲಿ,ಬಡವನ್ಯಾರು..??ಶ್ರೀಮಂತನ್ಯಾರು...????  ಎನ್ನುವುದಕ್ಕಿಂತ ಅವರಲ್ಲಿಯ ಆತ್ಮ ಎಷ್ಟು ನೆಮ್ಮದಿ, ಸಂತಸದಿಂದ ಇದೆ ಎನ್ನುವುದು ಮುಖ್ಯ. ಸುಖ ದುಃಖವೆನ್ನುವುದು ಮನಸ್ಥಿತಿ ಅಷ್ಟೆ. ಅದನ್ನು ಹೊಂದಲು ಮೋಹ,ಮದ, ಸ್ವಾರ್ಥ ರಹಿತ ಬದುಕಿಗೆ ಮನಸ್ಸು ಹದಗೊಳಿಸುದು ಅಗತ್ಯ. ನೀವು ಮಾಡುವ ಯಾವುದೇ ಕೆಲಸವಿರಲಿ ಆತ್ಮತೃಪ್ತಿ ಯೊಂದಿಗೆ ಮಾಡಿ...!!!

ಮಕ್ಕಳನ್ನು ಬೆಳೆಸುವ ಬಗ್ಗೆ ಜಾಗರೂಕರಾಗಿ

  ಸಣ್ಣವರಾಗಿದ್ದಾಗ ಮನಸ್ಸು ಕಲ್ಮಶ ರಹಿತವಾಗಿರುತ್ತದೆ.!  ನಾವೇ ನಮ್ಮ ಮಕ್ಕಳಿಗೆ ಮೋಹ, ಸಣ್ಣತನ ,ಸ್ವಾರ್ಥ ತುಂಬಿ ಅವರನ್ನು ಹೃದಯ  ಹೀನರಾಗಿಸುತ್ತೇವೆ. ತಾನು ಬಿತ್ತಿದ ಬೆಳೆ, ಅದಕ್ಕೆ ಹಾಕಿದ ನೀರಿಂದ ಬೆಳೆದ ಬೆಳೆಯ ಹಣ್ಣು ತಾವೇ ಮುಂದೆ ತಿನ್ನಬೇಕು... ಆದರೆ ಬೆಳೆಸಿದ ಮರ ಗಾಳಿ ಮರವಾದರೆ ,ಅಥವಾ ಕಾಸನ ಮರ ಆದರೆ ಕಷ್ಟ. ಫಲ ಕೊಡದಿದ್ದರೂ ನೆರಳು ಕೊಟ್ಟರೂ ಸಾಕು...ಮರ ಬೆಳೆಸುವ ಅರ್ಥಾತ್ ನಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆ ಜಾಗರೂಕರಾಗಿ....ಸಮಾಜಕ್ಕಾಗಿ ಅಲ್ಲ... ಮುಂದಿನ ನೆಮ್ಮದಿಯ ಕುಟುಂಬಕ್ಕಾಗಿ...ಹಾಗೂ ವೃಧ್ಯಾಪ್ಯದ ನೆಮ್ಮದಿಯ ಜೀವನಕ್ಕಾಗಿ

ಸ್ವಾಭಿಮಾನ

 ನಮ್ಮ ಸೋಲು ,ನಾವು ಸ್ವಾಭಿಮಾನ ಬಿಟ್ಟಾಗ.!!!  ನಮ್ಮ ಗೆಲುವು ಸ್ವಾರ್ಥ ಗೆದ್ದಾಗ💐 ನಮ್ಮ ಬದುಕು,ದಿನ ಬಂದಂತೆ ಹೊಂದಿ ನಡೆದಾಗ..ಇದ್ದದ್ದೆ ಭಗವಂತ ಕೊಟ್ಟದ್ದು ಎಂದರರಿತಾಗ... ನೆಮ್ಮದಿ...ಸಾರ್ಥಕ!  ಇಲ್ಲದುದ ಹಂಬಲಿಸಿ ಕೂರುವುದೆ ದುಃಖ ,ಅದೇ ಸೋಲು ಹಾಗೂ ಜೀವನದ ಸಾವು. ಇರುವದರಲ್ಲೆ ಅನುಭವಿಸಿ, ನೆಮ್ಮದಿ ಪಡುವ ಪ್ರಯತ್ನ ನಿರಂತರವಾಗಿರಲಿ.

ಮುಸ್ಸಂಜೆ ಮಾತು

 "ಮುಸ್ಸಂಜೆ ಮಾತು" ಕೆಂಪಡರಿ ಪಳಪಳಿಸಿ, ಹೊಸ ಆಸೆ ಬಿತ್ತಿ, ಕತ್ತಲೆಯ ಕೂಪದಲಿ ಎನ್ನೆದೆಯ ತಳ್ಳಿ ,  ಒಂಟಿಯಾಗಿಸಿ ನೀ, ಕಸಿದೆನ್ನ ಮುದವ  ಒಬ್ಬನೇ ಏಕೆ ಮುಳುಗಿ ಮರೆಯಾದೆ ರವಿ ನೀ ದೂರದಲ್ಲಿ. ಬಿಸಿ ಉಸುಕ ಮೈ ಹಾಸಿ, ಮೇಲೆ ಬೀಸಿದೆ ತಂಗಾಳಿ,ತಣಿಸುವುದೇ ಒಡಲ ಬೆಂಕಿ. ನೀನೇನೋ ಜಾರಿದೆಯೋ, ಸರ್ವರನು ಮರೆತು. ಬಿಟ್ಟು ತೊಲಗಿಹೆ ನೀ ಎನ್ನ ಒಂಟಿ ಮನವ. ಅಲೆಯು ಉಕ್ಕಿ ಅಪ್ಪಳಿಸುತಿದೆ ಭಾವನೆಗಳ ಏರಿ. ಬಿಳಿ ನೊರೆಯ ಸಾಲಿನಲಿ ಸಾಗಿ ಬರುತಿದೆ ನೋಡು, ನೂರಾರು ಹೊಲಸು ಸೇರಿ.  ಶುಭ ಶುಭೃ ನೊರೆಯು ಸಾಕೆನೆಗೆ , ಹೊತ್ತೊಯ್ಯು ಹೊಲಸು ನಿನ್ನೊಡಲಿನೊಳಗೆ. ಬಿಳಿ ನೊರೆಗೆ ಮುತ್ತಿಕ್ಕಿತಡಿಯ ಮರಳಿನ ರಾಶಿ, ಪಳಪಳನೆ ಮಿಂಚುತಿರಲಿ. ಪೂರ್ಣ ಚಂದಿರನದಕೆ ಮಂದ ಬೆಳಕನು ಚೆಲ್ಲಿ, ಹೊಸ ಕನಸ ಮನಸೊಳಗೆ ಬಿತ್ತುತಿರಲಿ.  ಮನದ ಮೂಲೆಯ ತುಂಬಿ, ಒಂಟಿಯಾಗಿಸದೆ ಜಾಗ ತುಂಬುತಿರಲಿ..

ಸ್ವಾರ್ಥ ಮತ್ತು ಅಭಿಲಾಷೆ

 ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ, ಅತಿಯಾದ ಸ್ವಾರ್ಥ ಮತ್ತು ಅಭಿಲಾಷೆಗಳೇ ಕಾರಣ ...!!! ಮೊದಲನೆಯದು.... ಬೇರೆಯವರ, ಬಾಹ್ಯ ಜೀವನದ ವಸ್ತುಗಳನ್ನು ಕಂಡು, ಅವುಗಳನ್ನು  ನಿರೀಕ್ಷಿಸುವುದು..!!! ಎರಡನೆಯದು , ಅಂತಹುಗಳನ್ನು ಪಡೆಯಲು ತನ್ನ ನೆಮ್ಮದಿ ಕಳೆದುಕೊಂಡು ಮತ್ತಷ್ಟು ಚಿಂತೆ, ದುಃಖ,ಕಷ್ಟಗಳ ಕಡೆಗೆ ಗೊತ್ತಿಲ್ಲದೆ ಸಾಗುವುದು..!!! 

ನಿಂದಕರಿರಬೇಕು...

  ಇದು ನಿನ್ನಿಂದಾಗದು, ಎಂದು ಮೂದಲಿಸಲ್ಪಟ್ಟವರ ಮುಂದೆ ಅದನ್ನು ಸಾಧಿಸಿ ತೋರಿಸುವುದು ಸಾಧನೆ...!! ಅದರಿಂದ ಸಿಗುವ ಸಂತಸವೇ ಗೌರವ ..!!  ಆ ಗೆಲುವಿನ ಹೋರಾಟದ ಪಾಠವೇ ಸಿದ್ದಾಂತ..!!! ಹಾಗಾಗಿ ಹಿರಿಯರ ಮಾತು ಸತ್ಯ.... ನಿಂದಕರಿರಬೇಕು. .....ಪ್ರತಿ ಬಾರಿ ಬೀಳುವ ಪೆಟ್ಟು ನೋವೆಂದೆಣಿಸಿರೂ ಅದರ ಅಂತಿಮ ಪ್ರತಿಫಲ ಗೆಲವು ಮತ್ತು ಸಂತಸವೇ ಆಗಿರುತ್ತದೆ..!!

ಗೆಲುವು ..

 ಜೀವನದಲ್ಲಿ ಗೆಲುವವರು ಇಬ್ಬರು..!!!  ಒಬ್ಬರು, ಎಲ್ಲರ ಮಾತನ್ನು ಆಲಿಸಿ, ಮಂಥಿಸಿ, ನಂತರ ತನ್ನದೇ ಸೂಕ್ತ ತೀರ್ಮಾನಕ್ಕೆ ಬರುವವರು...!!!! ಇನ್ನೊಬ್ಬರು, ಎಲ್ಲಾ ಹಿಂದಿನ ತನ್ನ ಅನುಭವವನ್ನು ಪಣಕಿಟ್ಟು , ಸತ್ಯ ಧೈರ್ಯದಿಂದ ಮುನ್ನಡೆಯುವವರು...!!!!  ಹಾಗಾಗಿ  ಸಂದರ್ಭಕ್ಕನುಗುಣವಾಗಿ ,ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ, ಗೆಲುವಿನ ಆಶಯದಿಂದ ಮುಂದುವರಿಯುವುದು ಮುಖ್ಯ.!!! 

ಸ್ವರ...ಧ್ವನಿ

 "ಸ್ವರ" ಏರಿಸಬೇಡ...ಮನದ ಮಾತಿನ  ಮೌಲ್ಯ ದ "ಧ್ವನಿ" ಏರಿಸು.  ಜೀವನ ಉನ್ನತಕ್ಕೇರಿಸುತ್ತದೆ. ಗುಡುಗು ಗಡಗಡಿಸಿದರೇನು, ಮಳೆ ನೀರ ಸಿಂಚನ, ಪುಷ್ಪ ಫಲವ ನೀಡುವ ಹಸಿರ ಧ್ವನಿಯಾಗದೇನು?

ನಾಳೆ...

 ನಾಳೆಯೆಂಬ ದಿನದೆಡೆಗೆ ಭರವಸೆಯ ಬದುಕು ಇರಲಿ. ಆಸೆ ,ನಿರೀಕ್ಷೆಗಳ ಸಂಘರ್ಷದ ಬಾಳು ಬಾರದಿರಲಿ. ದಕ್ಕಿದ ದಿನದ ಬಗ್ಗೆ ಸಮಾಧಾನವಿರಲಿ. ಕಳೆದುಳಿದ ಜೀವನದಲಿ ನೆಮ್ಮದಿ ಇರಲಿ. ಇಲ್ಲದಿರುವುದ ಬಗ್ಗೆ ಹಂಬಲಿಸಿ ಮಂಕಾಗುವುದು ಬೇಡ.. ಸಿಕ್ಕಿದ ದಿನಗಳ ಬಗ್ಗೆ ಸಂತೃಪ್ತಿ ಬೇಕು. ನಾಳೆ ಎನ್ನುವ ಬಗ್ಗೆ ಭ್ರಾಂತಿ ಬೇಡ. ನಾಳೆಯು ಇಂದಾಗಿ, ನಿನ್ನೆ ಆಗುತ್ತದೆ ಎನ್ನುವ ವಾಸ್ತವ ಅರಿಯಬೇಕು. ವರ್ತಮಾನವೇ ಸತ್ಯ, ನಿತ್ಯ. ಸಾಗುತಿರಲಿ ಜೀವನದ ಒಂದೊಂದೆ ಕ್ಷಣ ಅನುಭವಿಸಿ, ನೆಮ್ಮದಿ ಸುಖವನುಂಡು . ಪಡೆದುದನ್ನೆ ಗುರುತಿಸಿ, ಸಂತಸ ಹೊಂದುವುದು ಮುಖ್ಯ..!!

ಮಕ್ಕಳ ಹೆಜ್ಜೆ

 ಮಕ್ಕಳು ಹೆಜ್ಜೆ ಇಡಲು ಕಲಿತಾಗ, ಓಡುತ್ತಾರೆ. ಯಾಕೆಂದರೆ ಅವರಿಗೆ ಹೆಜ್ಜೆಯ ಮೇಲೆ ಹಿಡಿತದಲ್ಲಿರುವುದಿಲ್ಲ.!!!  ಹಾಗೆಯೇ,...  ಕೆಲವೊಬ್ಬರು ಓಡುತ್ತಾರೆಂದರೆ, ಅವರಿಗೆ ಕೈ ಹಿಡಿದು ನಡೆಸುವವರ ಅವಶ್ಯಕತೆ ಇದೆ ಎಂದು ಅರ್ಥ ..!! ಆದ ಕಾರಣ, ಯಾರಾದರೂ ತುಂಬಾ "ಫಾಸ್ಟ್" ಅಂದರೆ ಅವರಿಗೆ ವಿವೇಚನೆ ಕಡಿಮೆ ಯಿದ್ದು, ಅವರನ್ನು ಆಧರಿಸಿ, ತಿಳಿಸುವ ಮನಸ್ಸು ಬೇಕೆನ್ನುವುದು ಸತ್ಯ....!!!ಓಡುವುದಕ್ಕಿಂತ ,ಪುಟ್ಟ ಹೆಜ್ಜೆ ಯನ್ನಾದರೂ ಆಧರಿಸಿ ನಡೆವುದು ಜೀವನದಲ್ಲಿ ಮುಖ್ಯ....!!!!

ಸಾಧನೆ

 ವ್ಯಕ್ತಿ ಸಾಧನೆಯ ಶಿಖರವೇರುವುದು ಮುಖ್ಯವಲ್ಲ. ಏರಿದ ಶಿಖರದಲ್ಲಿ ತನ್ನ ಸಾಧನೆಯ ಫಲ, ಶಾಶ್ವತ ಗೊಳಿಸುವುದು ಮುಖ್ಯ..! ಏರಿದ ಶಿಖರದಲ್ಲಿ, ಸ್ವಲ್ಪ ಮೈ ಮರೆತು ಉರುಳಿದರೂ, ಪುನಃ ಏಳಲಾಗದ ಪ್ರಪಾತದಲ್ಲಿ ,ಅನಾಥರಾಗಿ ಸಾಯುವ ಸಂಭವ ಜಾಸ್ತಿ..!! ಪ್ರಯತ್ನ, ಸಾಧನೆ ಮಾಡಲಾಗದಿದ್ದರೂ ತೊಂದರೆ ಇಲ್ಲ. ಇರುವುದರಲ್ಲೆ ನೆಮ್ಮದಿ &ಸಂತಸ ಅನುಭವಿಸುವ ಮನಸ್ಥಿತಿ ಇರಲಿ. ಮಾಡಿದ ಸಾಧನೆಯ ರಕ್ಷಣೆ ಮಾಡುವ ಹೊಣೆಗಾರಿಕೆ ಮಾತ್ರ ಎಲ್ಲಕ್ಕಿಂತ ಮಿಗಿಲು....ಜೀವನ, ಪ್ರಪಾತದಲ್ಲಿ ಉರುಳುವುದನ್ನು ತಡೆಯಲು !!!

ಪ್ರಕೃತಿ ಮತ್ತು ಮಗು

 ಮಣ್ಣಲ್ಲಿ ಆಡದ ಮಗು, ಮಣ್ಣಿನ ವಾಸನೆ ಪರಿಮಳ ಆಘ್ರಾಣಿಸಲಾರದು.ಇತ್ತೀಚೆಗೆ ಮಕ್ಕಳನ್ನು, ಸ್ವಚ್ಛತೆ ಹೆಸರಲ್ಲಿ ನೈಸರ್ಗಿಕ ,ಪ್ರಕೃತಿಯಿಂದ ದೂರವಿಡುತ್ತಿದ್ದಾರೆ. ಮಗುವಿಗೆ ನೈಸರ್ಗಿಕವಾಗಿ ದೊರಕುವ ಶಕ್ತಿ, ಸಂಬಂಧ, ಬದುಕುವ ಕಲೆ, ಸಾಮಾಜಿಕ ನಿಷ್ಠೆ, ವಿದ್ಯೆಯಿಂದ ದೂರವಿಟ್ಟು, ಅವರನ್ನು ಬಾವಿಯ ಕಪ್ಪೆಗಳನ್ನಾಗಿಸುತ್ತಿದ್ದಾರೆ.          ತಾಯಿಯ ಸ್ತನ ಪಾನ ಮಾಡಿದ ಮಗುವಿಗೆ ಮಾತ್ರ ತಾಯಿಯ ಮಮತೆಯ ಅರಿವಾಗುತ್ತದೆ. ತಾಯಿಯ ಎದೆ ಹಾಲು ಕುಡಿಯುವುದು ಕೇವಲ ಹೊಟ್ಟೆ ತುಂಬುವುದಕ್ಕಲ್ಲ. ದೇವರಿತ್ತ ನೈಸರ್ಗಿಕ ಬಳುವಳಿ, ಶಕ್ತಿ ಮತ್ತು ನಿರೋಧಕ ಶಕ್ತಿ ವರ್ಧಕ. ಮಾತೃ ,ವಾತ್ಸಲ್ಯ, ಸಂಬಂಧಗಳ ಜ್ಯೋತಕ. ಆದರೆ ಸೌಂದರ್ಯ, ಆಧುನಿಕತೆಯ ಹೆಸರಲ್ಲಿ ತಾಯಿಯೇ ತನ್ನ ಮಗುವಿಗೆ ಮೋಸ ಮಾಡುವ ದಿನ ಬಂದಿದೆ. ಹಾಲು ಕೊಡುವುದನ್ನು ಬಿಟ್ಟು, ಯಾವುದೋ ಪ್ರಚಾರದ ಅಬ್ಬರದ ಆಹಾರವನ್ನು ಮಗುವಿಗಿತ್ತು, ಮಗುವಿನ ದೇಹ ಗುಂಡಗಾಗಿಸಿ, ಜೀವ ಅಸಾಮರ್ಥ್ಯವಂತರಾಗಿ, ಖುಷಿಯ ಯವ್ವನದ ದಿನಗಳಲ್ಲಿಯೇ , ದೇಹವು ರೋಗ, ನಿರಾಸಕ್ತಿಯ ಗೂಡಾಗಿಸುತ್ತಿದ್ದಾರೆ. ಈ ಸಾಮಾಜಿಕ ರೋಗದಿಂದ, ಸಮಾಜ ದಿಕ್ಕು ಕಾಣದ ಕಗ್ಗತ್ತಲಿನತ್ತ ಸಾಗುತ್ತಿದೆ.           ಅದಕ್ಕಾಗಿ ಹುಟ್ಟಿಸಿದ ದೇವ ಹುಲ್ಲು ಮೇಯಿಸಲಾರ ಎಂಬ ನಾಡ್ಣುಡಿ ಹುಟ್ಟಿದ್ದು. ಅರ್ಥಾತ್ ಪ್ರತಿ ಜೀವಿಗೂ ದೇವನು ಬದುಕುವ, ಬದುಕನ್ನು ಗಟ್ಟಿಯಾಗಿಸುವ ಶಕ್ತಿ ನೀಡಿದ್ದಾನ...

ಮನಸ್ಸು ..

 ಮನಸ್ಸು ಯಾವಾಗಲೂ ಸುಖಮಯ ಹೆದ್ದಾರಿಯ ಪಯಣ ಬಯಸುತ್ತದೆ....! ಅದರೆ ಈ ಪಯಣದ ಖುಷಿಗೆ ಭಂಗ ತರುವ "ಹಂಪ್" ನ್ನು ದೂಷಿಸುತ್ತದೆ...!! ಆದರೆ ಸತ್ಯ ಅರ್ಥೈಸುವುದು ಮತ್ತು ಒಪ್ಪುವುದು ಅವಶ್ಯ...!!!  ಈ "ಹಂಪ್" ಇದ್ದರೆ ಮಾತ್ರ ನಮ್ಮ ಪಯಣ ಸುರಕ್ಷಿತ ...!!!! ಅಡೆತಡೆಗಳೂ ಕೂಡ ಜೀವನದ ಸಂತಸ ನೆಮ್ಮದಿಯ ಪ್ರಧಾನ ಅಂಶಗಳೇ...!!!! ಹೆಚ್ಚು ಕಷ್ಟ ಪಟ್ಟು ದಕ್ಕಿದ ಸುಖ, ಯಾವಾಗಲೂ ಧೀರ್ಘ ಕಾಲಿಕ ಮತ್ತು ನಿರಂತರ ಖುಷಿ ಕೊಡುತ್ತದೆ. ಸಾಧಿಸುವ ಛಲ ವೃದ್ಧಿಸುತ್ತದೆ....!!!!!!

ಧನಾತ್ಮಕ ಆಲೋಚನೆ.

 ಹಾವಿಗೆ ಹಾಲೆರೆದರೆ ಏನು ಫಲ... ವಿಷ ಹೆಚ್ಚುತ್ತದೆ ಎಂದು ಹಾಲೆರುವುದನ್ನು ನಿಲ್ಲಿಸಬಾರದು. ಕ್ರಮೇಣ ,ಹಾಲು ಕುಡಿದ ಹಾವಿನ ವಿಷವೂ ಕಾರ್ಕೋಟ ವಿಷವೂ ಅಮೃತವಾದೀತು. ಇಲ್ಲದೇ ಇದ್ದರೂ ವಿಷದ ಹಲ್ಲುಗಳು ಕಳಚೀತು. ಕೊನೆಯ ಪಕ್ಷ ಒಂದು ಜೀವಕ್ಕೆ  ನೀರಡಿಕೆಯಾದರೂ ನಿಲ್ಲಿಸಿದ ಪುಣ್ಯ ವಾದರೂ ಬಂದೀತು.. ನಮ್ಮ ಆಲೋಚನೆಗಳು ಧನಾತ್ಮಕ ಬದಲಾವಣೆ ಹೊಂದಿರುವುದು ಮುಖ್ಯ. ಕರ್ತವ್ಯ ಸಂಸ್ಕೃತಿ ಜೀವನದ ಭಾಗವಾದರೆ ನೆಮ್ಮದಿಗೆ ಮೋಸವಿಲ್ಲ.

ಮಾತು ಮಧುರ

 ಭಗವಂತ ಮನುಷ್ಯನಿಗೆ, ಪ್ರಪಂಚದ ಎಲ್ಲಾ ತಪ್ಪು ಒಪ್ಪುಗಳನ್ನು ನೋಡಲು, ಕೇಳಲು, ಮತ್ತು ವಾಸನೆ ಪರಿಮಳಗಳ ಆಘ್ರಾಣಿಸಲು...  ಕಣ್ಣು, ಕಿವಿ ಮೂಗಿನ ಹೊಳ್ಳೆ .....ಎರಡೆರಡು ಕೊಟ್ಟ.... . . ಆದರೆ ಮಾತಾಡಲು ಒಂದೇ ನಾಲಿಗೆ ಕೊಟ್ಟ...ಅಂದರೆ ತಪ್ಪು ಮಾತಾಡಲು ನಾಲಿಗೆ ಕೊಟ್ಟಿಲ್ಲ ...ಅಲ್ವಾ.

ನಂಬಿಕೆಯೇ ಇಂಬು ..

 ಹೃದಯ ಉರಿ ಹೊತ್ತು ಕರಟಿ ಕಣ್ಣೀರಿಳಿದಾಗ,. . .  ತಂಗಾಳಿ ಬೀಸಿ,ಬಿಸಿ ಮನಸ್ಸು ತಂಪಾಗಿಸಿತಲ್ಲ. ತುಂತುರು ಹನಿ ಮಳೆ,  ಕಣ್ಣೀರ ತೊಯ್ದು ಮರೆಮಾಚಿತಲ್ಲ. ಪಲ್ಲವಿಸಿದ ಪುಷ್ಪ ಸುವಾಸನೆ, ಕರಟಿದ ಹೃದಯದ ವಾಸನೆಯ ಕರಗಿಸಿತಲ್ಲ. ಮತ್ತೆ ಯಾರು ದೇವನಿಲ್ಲವೆಂದು ಕನವರಿಪರು. ಮೂಢನಾಗದಿರು, ನಂಬಿಕೆಯೇ ಇಂಬು ಕೊಡುವುದು ಬಾಳ ಹಾದಿಯಲಿ.

ತೊದಲು ನುಡಿ ...

 ತೊದಲು ನುಡಿ ಕಲಿಯಲು ಮಗು ಒಂದೆರಡು ವರ್ಷ ತೆಗೆದುಕೊಂಡರೂ..... ಮಾತು ಕಲಿಯಲು ಹತ್ತಾರು ವರ್ಷಗಳೇ ಬೇಕು... ಕಾಲ ಕಳೆದಂತೆ ,ಮಾತು ಮಾತಾಗಿರದೇ ಅದು ಮುತ್ತಾಗಬೇಕು. ಮಾತೇ ಮಾಣಿಕ್ಯ ವಾಗಬೇಕು.  ಮಾತಿನ ತೂಕ ಹೆಚ್ಚಾಗುತ್ತಾ ಹೋಗಬೇಕು.  ನಮ್ಮ ಮಾತು, ನಮ್ಮ ಗೌರವದ ಜ್ಯೋತಕವಾಗಬೇಕು.. ನಮ್ಮ ಮಾತಿಂದ ಸಮಾಜ ನಮ್ಮನ್ನು ಗುರುತಿಸುವಂತಾಗಬೇಕು.. ಇರುವುದೊಂದೇ ನಾಲಗೆ...ಒಂದೇ ಮಾತಾಗಬೇಕು. ಆದರ್ಶದ ಜೀವನದ ಅಡಿಪಾಯ ನಿರ್ಧರಿಸುವುದೇ, ಈ ನಮ್ಮ ಮನ ತುಂಬಿದ ಮಾತು... ಜಾಗರೂಕರಾಗಿ ಮಾತಾಡೋಣ.

ಹುಟ್ಟು... ಸಾವು ...

 ನಾವೆಲ್ಲ ಇಂದು ಹುಟ್ಟಿ... ನಾಳೆ ಎನ್ನುವ ದಿನ ಇಲ್ಲಿಯೇ ಸಾಯುವ ಯಕಶ್ಚಿತ್ ಪ್ರಾಣಿಗಳು. ನಾವೆಲ್ಲರೂ ದೇವನ ಪಗಡೆಯಾಟದ ಭಾಗ. ಆಟಗಾರ ಆಟವಾಡುವಾಗ  ರಾಜನೋ, ಕಾಲಾಳೋ,ಕುದುರೆ ಎಂದು ಚೆಸ್ ಬೋರ್ಡ್ ಮೇಲಿರಿಸಿ ಸಂಭೃಮಿಸುವುದು ಸತ್ಯವೇ...ಆದರೆ ಅದು ಆಟಗಾರನ ಕ್ಷಣಿಕ ಆಟದ ಭಾಗವಷ್ಟೆ. ಒಮ್ಮೆ ಆಟ ಮುಗಿಯುತ್ತಿದ್ದಂತೆ ಆಟಗಾರ, ರಾಜ ಕಾಲಾಳುಗಳನ್ನೆಲ್ಲಾ , ಒಂದೇ ಡಬ್ಬದಲ್ಲಿ ಸೇರಿಸುತ್ತಾನೆ ಸಮಾನ ಬೆಲೆಯ ನೆಲೆಯಲ್ಲಿ.

ಸತ್ಯ... ಮಿಥ್ಯೆ..

 ಸತ್ಯ ಮುಚ್ಚಿಟ್ಟಸ್ಟೂ ಮಂಕಾಗುತ್ತದೆ. ಮಿಥ್ಯೆ ಹೊರಗಡೆದಷ್ಟೂ ಶುದ್ಧವಾಗುತ್ತದೆ. ಸತ್ಯ ಒಪ್ಪದ ಮನಸ್ಸು, ಕ್ಷೋಭೆಯಿಂದ ಬಡಬಡಿಸುತ್ತವೆ,ಅರೆ ಬೆಂದ ಅನ್ನ ತಿಂದು, ಗಂಟಲಲ್ಲಿ ಸಿಕ್ಕಿ ಒದ್ದಾಡಿದಂತೆ. ಸತ್ಯ ಒಪ್ಪುವುದು ಅಷ್ಟು ಸುಲಭವಲ್ಲ. ಸತ್ಯ ಅರಗಿಸಲು ಕಷ್ಟ, ಮಥಿಸಿ ಮನನ ಮಾಡಲು ಸಾವಧಾನ ಬೇಕು...ಮನಸ್ಸಿಗೆ ನೆಮ್ಮದಿ ಬೇಕು. ಸತ್ಯ ಸಾಯದು,...ಅರಗಿಸಲಾಗದ ಅತೃಪ್ತ ಆತ್ಮಗಳ ಬಡಬಡಿಕೆಗೆ  ಸತ್ಯ ನಾಶವಾಗದು..ಸತ್ಯವನ್ನು ಸಂಶೋಧಿಸಿ, ಸದಾ ಅರಗಿಸಿಕೊಳ್ಳುವ ಪ್ರತಿಭೆ ಮತ್ತಷ್ಟು ಬೆಳೆಯುತ್ತದೆ......

ಪರಮಾತ್ಮನ ಕೃಪೆ

 ಹುಟ್ಟಿದ ಜೀವಕ್ಕೆ ಎದ್ದು ನಿಂತು ನಡೆಯಲು ಬೇಕು... ಪರಮಾತ್ಮನ ಕೃಪೆ. ಜೀವನದುದ್ದಕ್ಕೂ ಬೇಕು, ಕೈ ಹಿಡಿದು ನಡೆಸಲು ಭಗವಂತನೆಂಬ ಊರುಗೋಲು. ಆದರೂ, ನಮ್ಮ ಕೋರಿಕೆ ಒಂದೇ ಇರಲಿ ಭಗವಂತನಲ್ಲಿ......  ಮುಪ್ಪಿನಲಿ ಕರುಣಿಸದಿರು "ಊರುಗೋಲು" ಹಿಡಿದು ನಡೆಯುವ ಭಾಗ್ಯ..  ಬದಲಿಗೆ ಕೈ ಹಿಡಿದು ಕರೆದುಕೊಂಡು ಹೋಗು ನಿನ್ನೊಡನೆ, ನಿನ್ನ ಮನೆಗೆ..