ಮೌನದ ತೊಳಲಾಟ
ನನ್ನತನದ ಲಾಲಸೆ,ಪ್ರಾಪಂಚಿಕ ಸ್ವಾರ್ಥವೆನಿಸಿದರೆ...ಸತ್ಯ.
ಪ್ರತಿಯೊಂದು ಆತ್ಮವೂ ತನ್ನ ಅಸ್ತಿತ್ವಕ್ಕಾಗಿ ನಡೆಸುವ ನಿರಂತರ ಹೋರಾಟವೇ "ಜೀವನ".
ಜೀವನವೆನ್ನುವುದು, "ಆತ್ಮ" ಮತ್ತು ಭೌತಿಕ "ದೇಹ"ದ ಕೂಡು ನಡೆ.
ಅಂದರೆ ದೇವನೊಲುಮೆಯ ದೇಹ, ಆತ್ಮಗಳೆ ಮುಖ್ಯ ಮತ್ತು ಪೂರ್ವ ನಿರ್ಧರಿತ ಎಂದಿರುವಾಗ..
ಮತ್ತೇಕೆ ಬವಣೆ?
ಮನಸ್ಸಿನಾಣತಿಯಂತೆ ನಡೆ, ಪ್ರತಿಫಲದ ನಿರೀಕ್ಷೆ ಬಿಟ್ಟು.
ಬೇರೆ ಆತ್ಮಗಳ ನಡುವೆ ಸ್ಪಂದಿನೆಯಿರಲಿ, ಆದರೆ ಬೇರೆ ಆತ್ಮಗಳ ಮೇಲಿನ ವ್ಯಾಮೋಹ
ನಮ್ಮೆಲ್ಲಾ ದುಃಖದ ಮೂಲ.
ಆತ್ಮ ಪರಮಾತ್ಮನ ಅಂಶವಾಗಿರುವಾಗ,ದೇವನೇ ಆ ಆತ್ಮಗಳ ನಿರ್ಧೇಶನ ಮಾಡುತ್ತಿರುವಾಗ, ನಿನ್ನಿಂದ ಏನಾದೀತು ಇತರರ ಆತ್ಮೋದ್ಧಾರ?
೨)ಅಂತರಂಗದ ಮಂಥನದ ಉತ್ಪತ್ತಿ "ಮೌನ" ವಾದರೆ, ಜೀವನದ ಭವಿಷ್ಯದ ನಡೆಯ, ದಾರಿ ಹುಡುಕುವ ಕ್ಷಮತೆ ವೃದ್ಧಿಸೀತು.
ಮೌನದ ತೊಳಲಾಟವೇ, ಉಕ್ಕಿ ಆಂತರ್ಯದ ಬೇಗೆ,ಮನಸ್ಸಾಗರದ ದೈತ್ಯ ಅಲೆಗಳ ಉಗಮದ ಜ್ವಾಲಾಮುಖಿಯಾದರೆ, ಎಲ್ಲವೂ ಪ್ರಯಳ ನಾಶದ ಹಾದಿ.
Comments
Post a Comment