ಚಿಟ್ಟೆ..

 


ಚಿಟ್ಟೆ... ಇಷ್ಟೊಂದು ಸುಂದರ ತನುವ ಹೊಂದಿ,ಬಣ್ಣ ಬಣ್ಣದ ಲಲಿತಾಂಗಿ ನೀನೇಕೆ ಅಲ್ಲಲ್ಲಿ ಅಲೆಯುವೆ ?.

ಆ ನೀಳ ಸೂಕ್ಷ್ಮ ಆಘ್ರಾಣ ಹೊತ್ತು ಅಲೆದು, ಮಧುವ ಹೀರುವ ನೆವದಿ, ಯಾರದೋ ಜೀವೋತ್ಪಾದನೆಗೆ ಬದುಕ ಸವೆಸುತಲಿರುವೆ.

ಜೀವನವೇ ಹೊಯ್ದಾಟ, ಅಲ್ಲಿಲ್ಲಿ ಅಲೆದಾಟ, ಲಾಭ ಪಡೆವವನ್ಯಾರೊ ಅಪರಿಚಿತ.

ಆದರೂ ಲೋಕದ ಕಣ್ಣಿಗೆ "ಪಾತರಗಿತ್ತಿ".

ಜೀವನವೇ ಹೀಗೆ , ಕಾಣುವ ಪರದೆಯ ಬಣ್ಣದ ಬದುಕಿಗೂ  ಪ್ರಪಂಚ ಗುರುತಿಸದ ಮತ್ತೊಂದು ಆಯಾಮವಿದೆ.

 ಈ ಪತಂಗ/ ಚಿಟ್ಟೆ/ ಪಾತರಗಿತ್ತಿ... ಯಾರಾದರೇನು...ತನ್ನ ಹೀರುವಿಕೆಯಲ್ಲಿ ಎಷ್ಟೊಂದು ಸೂಕ್ಷ್ಮತೆ...

Comments

Popular posts from this blog

ಸತ್ಯ..

ಹೇಳಲಾರದ ಮಾತುಗಳು