ಮುಂದಿನ ದಿನ ಹೇಗಿರಬಹುದು ಎಂಬ ಚಿಂತೆಗಿಂತ, ಕಳೆದ ಸುಖ ಸಂತಸದ ದಿನಗಳ ಸವಿ ನೆನಪಿನೊಂದಿಗೆ ,ಸೋತ ಅನುಭವದೊಂದಿಗೆ ಮುನ್ನಡೆಯೋಣ. ಜೀವನ ನಾವೆಣಿಸಿದಂತೆ ಇರಬೇಕೆಂದು ಬಯಸುವುದಕ್ಕಿಂತ, ಬಂದಂತೆ ಎದುರಿಸಿ ಬಾಳುವ ಮನಸ್ಥಿತಿ ಬೆಳೆಸಿಕೊಳ್ಳೋಣ. ನಿತ್ಯವೂ ಕಷ್ಟದ ಬದುಕು ಎಂದು ಎದೆಗುಂದಬಾರದು. ಕಷ್ಟದ ದಿನಗಳೆಂದರೆ ನೀವು ಸೋತಿದ್ದೀರಿ ಎಂದರ್ಥವಲ್ಲ. ನೀವು ಗೆಲುವಿನ ದಾರಿಯಲ್ಲಿ ನಡೆಯುತ್ತಿದ್ದೀರಿ ಎಂದೇ ಭಾವಿಸಬೇಕು. ಗೆಲುವಿನ ದಿನಗಳು ಹತ್ತಿರ ಅಥವಾ ದೂರವೆನ್ನುವುದರ ಬಗ್ಗೆ ನಿರಾಶೆ, ಸಂಶಯ ಬಿಟ್ಟಷ್ಟೂ ಒಳಿತು. ಜೀವನ ಬಹಳ ಸರಳ..ಎಲ್ಲರೊಂದಿಗೆ ನಗುತ್ತಾ, ಹೊಂದಿಕೊಂಡು ಸರಳವಾಗಿ ಜೀವನ ನಡೆಸಿದರೆ ಅದೇ ಸ್ವರ್ಗ. ಆದರೆ ಕಷ್ಟವಿರುವುದು ಎಲ್ಲಿ ಮತ್ತು ಜೀವನದ ತೊಡಕು ಯಾವುದು?... ಅದೇ ಸರಳವಾಗಿ ಇರಲು ಒಪ್ಪದ ಮನಸ್ಸು.
ಅಖಂಡ ಭಾರತವು ಒಂದು "ಕರ್ಮ" ಭೂಮಿ. ಇಲ್ಲಿನ ಮಣ್ಣಿನ ಮೂಲ ಬೇರು "ಹಿಂದೂ" ಧರ್ಮವೆಂಬ ಕರ್ಮ ಆಧರಿದ ಜೀವನ ಕ್ರಮ. ಈ ಜೀವನ ಪದ್ಧತಿಯಲ್ಲಿ ,"ಜಾತಿ-caste" ಎಂಬ ಪದವೇ ಇಲ್ಲ.ಎಲ್ಲರೂ ಸಮಾನರು,ಆದರೆ ಅವರು ಅನುಸರಿಸುವ ಕರ್ಮ/ಕಾರ್ಯಗಳಿಂದ ನಾಲ್ಕು ವಿಭಾಗದಲ್ಲಿ ಗುರುತಿಸಲ್ಪಡುತ್ತಿದ್ದರು.ಅವುಗಳನ್ನು ವರ್ಣಗಳೆಂದು ಗುರುತಿ ಸಲ್ಪಡುತ್ತಿತ್ತು.ಎಲ್ಲವೂ ಮುಕ್ತಿಗಾಗಿ, ದೇವರ ಅನುಗ್ರಹಕ್ಕಾಗಿ ಆರಿಸಿಕೊಂಡ ಗೌರವಯುತ ಮಾರ್ಗಗಳಾಗಿದ್ದವು. "ವಸುದೈವ ಕುಟುಂಬ"ವೆಂಬ ಪರಿಕಲ್ಪನೆ ಇತ್ತು.ಯಾರೂ ಯಾವ ಸಮಯದಲ್ಲಿಯೂ ತನ್ನ ಆಯ್ಕೆಯ "ಕರ್ಮ"ದಲ್ಲಿ ಮುಂದುವರಿಯುವ ಮುಕ್ತತೆ ಇತ್ತು. ಆದರೆ ಯಾವಾಗ ಬ್ರಿಟಿಷರು, ಪೋರ್ಚುಗೀಸರು ಈ ನೆಲದಲ್ಲಿ ಕಾಲಿಟ್ಟರೋ, ಅವರು ತಮ್ಮ ಲಾಭಕ್ಕಾಗಿ, ವರ್ಣ ವ್ಯವಸ್ಥೆಯನ್ನು ತಿರುಚಿ, ಅವರ ಅನುಕೂಲಕ್ಕಾಗಿ ಜಾತಿ ವ್ಯವಸ್ಥೆಯೆಂಬಂತೆ ನಿಧಾನವಾಗಿ ಮಾರ್ಪಡಿಸಿದರು. ಮೇಲ್ವರ್ಗ ,ಕೆಳವರ್ಗವನ್ನು ಸೃಷ್ಟಿಸಿ ಅದನ್ನು ಜಾತಿ ಹೆಸರಲ್ಲಿ ಶ್ರೇಣೀಕೃತಗೊಳಿಸಿದರು. "Casta" ಎನ್ನುವ ಪೋರ್ಚುಗೀಸರ "ರಕ್ತ ಸಂಬಂಧ" ಎನ್ನುವ ಪದವನ್ನು, ಜಾತಿಯ ವ್ಯವಸ್ಥೆಯ ಅರ್ಥದಲ್ಲಿ ರೂಪಾಂತರಗೊಳಿಸಿ, ನಮ್ಮ ಜನರಲ್ಲಿ ಭೇದ ,ದ್ವೇಷದ ಕಂದಕ ಸೃಷ್ಟಿಸಿ ತಮ್ಮ ಪಿತೂರಿಯ ಭಾಗವಾಗಿಸುವಲ್ಲಿ ಸಫಲತೆ ಕಂಡರು. ಇದರ ಭಾಗವಾಗಿ, ಆಗಿನ ಕೆಲವು ಮುಂದುವರಿದ ಜನಾಂಗದ ಜನರನ್ನೆ ಆಯ್ದು, ಅವರ ...
ಹಾಲಾಡಿ ಹಬ್ಬ ಅಂದ್ರೆ "ಮರ್ಲು ಚಿಕ್ಕು" ದೈದ್ಮನಿ ಗೆಂಡ. ಪ್ರತಿವರ್ಷ ಜನವರಿ ತಿಂಗ್ಳಂಗೆ ,ಗೋಳಿಕಟ್ಟಿ ಹಬ್ಬ ಆದ್ಮೆಲ್, ಆರೇಳ್ ದಿನಕ್ ಬಪ್ದ್. ಏಗಳಿಕೂ ಜನವರಿ 21 ರ ರಾತ್ರಿ ಗೆಂಡ, 22 ಕ್ಕೆ ಹಾಲಹಬ್ಬ. ರಾತ್ರಿ ಹಾಲಾಡಿ ಮ್ಯಾಳದ ಸೇವೆ ಆಂಟ. ಹಾಲಾಡಿ ಹೊಳಿ ಸೇತ್ಮಿ ಬದಿಯಂಗೆ ರಸ್ತಿ ಆಚಿ ಈಚಿ ಬದಿಯಂಗೆ ಎರ್ಡ್ ದೈದ್ಮನಿ. ಪಡ್ಲಾಯಿ ಇಪ್ದ್ ಆದಿ ಮರ್ಲು ಚಿಕ್ಕು ಅಂಬ್ರ್. ಕೊಯ್ಕಾಡಿ ಕುದ್ರುಮನಿಯರ್ ಸಂಬಂಧ ಪಟ್ಟದಂಬ್ರ್. ಮತ್ತೊಂದು ಮೂಡ್ಲಾಯಿ ಬದಿಯಂಗಿಪ್ದ್ ಹಾಲಾಡಿ ಮನಿಯರದ್. ಈ ದೈವ, ಪಡ್ಲಾಯಿ ಬದಿಯಂಗಿಪ್ಪ ಖಾರ್ವಿ ಜನಾಂಗದವ್ರ್ ನಂಬಿದ್. ಅದ್ಕೆ ಈ ದೈದ್ಮನಿ ಗೆಂಡ ಅಂದ್ರೆ ಮೀನಿನ ವ್ಯಾಪಾರ ಜೋರ್. ಆಗಳಿನ್ ಕಾಲ್ದಂಗೆ ದೋಣಿ ಮ್ಯಾಲ್ ಮೀನ್ ತಂದ್ ಮಾರ್ತಿದ್ರ್. ಗೆಂಡದ ದಿನ ರಾತ್ರಿ ಒಂದ್ಗಂಟಿ ಮ್ಯಾಲ್ ಗೆಂಡದ ಹೊಂಡಕ್ ಬೆಂಕಿ ಹಾಕಿ, ಗೆಂಡ ಮುಗ್ದ್ ಮ್ಯಾಲ್, ಬೆಳ್ಳಿ ಮೂಡ್ವತಿಕ್ ದಕ್ಕಿಬಲಿ ಸೇವೆ. ದೈದ್ಮನಿಗ್ ಹೋಪ್ಕೆ ಓಣಿ ರಸ್ತಿ. ಆದ್ರೂ ಸೇತ್ಮಿ ಬದಿಯಂಗೆ, ರಸ್ತಿಯಿಂದ್ ಇಳೂಕ್ ಮೆಟ್ಲ್ ಮಾಡಿ ಇಟ್ಟೀರ್. ಆದ್ರೂ ಇಳೂಕ್ ಕಷ್ಟ. ಆಗಳಿಕ್ ನಾವ್ ರಾತ್ರಿ ಹನ್ನೊಂದು ಗಂಟೆ ಮ್ಯಾಲ್,ದೈದ್ಮನಿ ಹೋಪ್ದ್. ಮರ್ತಪ್ಪಯ್ಯನ ಮ್ಯಾಮಿ ಮಿಠಾಯಿ ಅಂಗ್ಡಿ. ಬಾಬಯ್ಯ ಮತ್ತು ಬೊಕ್ಕಯ್ಯನ ಚಾ ತಿಂಡಿ ಹೋಟ್ಲ್. ಐಸ್ಕ್ಯಾಂಡಿ ಶೀನನ ಐಸ್ಕ್ಯಾಂಡಿ ಡಬ್ಬ. ಆ ರಾತ್ರಿ ಚಳಿಯಂಗೂ ಐಸ್ಕ್ಯಾಂಡಿ ತಿಂಬ್ದ್. ಕರ್ಗುಂಜಿ ಹಣ್ಣಿನ ಸೇಡ್ ತಕಂಡ್ ಕಪ್...
Comments
Post a Comment