ಅನಾಥ..
ನನ್ನದೂ ಒಂದು ರಾಜ್ಯ. ನನ್ನದೇ ರಾಜ್ಯದಲ್ಲಿ ನಾನೊಬ್ಬ ಅನಾಥ.
ಕೈ ಹಿಡಿದು ನಡೆಸುವವರಿಲ್ಲ, ಬೇಸರವಿಲ್ಲ. ನಾನು ಕುಂಟುತ್ತಾ ನಡೆಯುವುದನ್ನೂ ನೋಡಿ ನಗುವ ಜನರ ಮಧ್ಯೆ ನಾನು ತೆವಳುತ್ತಿರುವೆ. ಆದರೂ ಮನಸ್ಸು ಅದನ್ನು ಗಮನಿಸುತ್ತಿಲ್ಲ.
ನಾನು ಅದನ್ನು ಗಮನಿಸಿದರೆ ನನಗೆ ಲಾಭವಿಲ್ಲ ಅಥವಾ ಅನುಕಂಪವನ್ನು ಆಶಿಸುವ ಮನಸ್ಸು ಉಳಿದಿಲ್ಲ.
ನಾನೂ ಬಡವನೆ ಆದರೆ ತನ್ನ ಬೆನ್ನಿಗೆ ನನ್ನಜ್ಜ ಅದೇನೊ ಬೇರೆಯವ ಓದದ್ದು ಓದಿದ್ದ ಎಂಬ ಮೊಹರು. ಆ ಕಾರಣವೇ ನಾನು ಬಡವನಲ್ಲ. ನಾನೊಬ್ಬ ,ಇನ್ನೊಬ್ಬರನ್ನು ತುಳಿದ ಧೂರ್ತನೆಂಬ ಹಣೆ ಪಟ್ಟಿ ಬೇರೆಯವರಿಂದ ಬಿಗಿಸಿಕೊಂಡ ಗರ್ವಿ.
ತನ್ನ ಅಜ್ಜ ಓದಿದ್ದು ಅದ್ಯಾವುದೊ ಗೀತೆಯಂತೆ,ವೇದವಂತೆ. ಅದೇ ನಿತ್ಯವೂ ನನ್ನ ವಧೆಗೆ ಈಗ ಎಲ್ಲರ ಬಾಯಲ್ಲಿನ ಗೀತೆ.
ನನ್ನಜ್ಜ,ಮುತ್ತಜ್ಜ ಯಾರಾದರೂ ರಾಜನಾಗಿದ್ದನಾ ಎಂದು ಹುಡುಕಿದೆ. ದೊರಕ್ಕಿದ್ದು ಬಡತನದ ಅರೆಹೊಟ್ಟೆ. ಕೊಂದು ತಿಂದವನಾ ಎಂದರೆ ಏನೂ ತಿನ್ನದ ಹುಲ್ಲೆ.
ತಟ್ಟನೆ ನೆನಪಾಯಿತು. ಹುಲಿಗೆ ಹುಲ್ಲೆಯೆ ಆಹಾರ. ಹುಲಿಯೇ ಕಾಡಿನ ರಾಜ.
ಕೊಂದು ತಿನ್ನುವ ಹುಲಿಗೆ ಬಡ ಹುಲ್ಲೆಯ ಮೇಲೆಕೆ ಸಿಟ್ಟು.. ಕಾರಣ ಹುಲ್ಲೆಯ ಓಟ. ತಾನು ರಾಜನಾದರೂ ಬೇಟೆಗೆ ಸುಲಭದ ಹುಲ್ಲೆಯಾದರೂ ,ಓಡಾಡಿಸಿ ಹಿಡಿದು ತಿನ್ನಲು ಸ್ವಲ್ಪ ಬೆವರು ಬೇಕಲ್ಲವೆ.
ಹುಲ್ಲೆಯೂ ಹಾಗೆ ಓಡುವ ಬದಲು, ಗುಂಪಾಗಿ ಪ್ರತಿರೋಧ ಒಡ್ಡುವ ಶಕ್ತಿ, ದವಡೆ ಪಡೆದಿಲ್ಲ.
ಅದಕ್ಕಾಗಿ ಒಂದೊಂದು ಮರಿಯ ಬೆನ್ನತ್ತಿ ಬೇರ್ಪಡಿಸಿ ಕೊಲ್ಲುವ ಸುಲಭ ವಿದ್ಯೆ ರಾಜ ಅರಗಿಸಿಕೊಂಡಾಗಿದೆ.
ನಾನು ರಾಜನಿಗಾಗಿ ನಿತ್ಯವೂ ಪ್ರಾರ್ಥಿಸಿ ಅರ್ಧ ಜೀವತೆತ್ತೆ. ನನ್ನದೇ ರಾಜ ಈಗ ನನ್ನನ್ನೆ ಕೊಲ್ಲುವ ಹುಲಿಯಾದ. ರಾಜಾಹುಲಿಯಾದ.
ನನ್ನ ರಕ್ಷಣೆ ಯಾರಿಂದ ನಿರೀಕ್ಷೆ ಮಾಡಲಿ. ಮಾಡುವುದು ಕೂಡ ಮೂರ್ಖತನ.
#ಕೊಡಬೇಡ ದೇವಾ.. ಮುಂದೆಂದೂ ಜನ್ಮ. ಕೊಡಬೇಡ ದೇವ ಸಂತಾನ. ಸುಡಲಿ ನನ್ನ ಚಿಂತೆ ನನ್ನ ಚಿತೆಯ ಬೆಂಕಿಯಲ್ಲಿ.
Comments
Post a Comment