ಪ್ರಕೃತಿ ಮತ್ತು ಮಗು

 ಮಣ್ಣಲ್ಲಿ ಆಡದ ಮಗು, ಮಣ್ಣಿನ ವಾಸನೆ ಪರಿಮಳ ಆಘ್ರಾಣಿಸಲಾರದು.ಇತ್ತೀಚೆಗೆ ಮಕ್ಕಳನ್ನು, ಸ್ವಚ್ಛತೆ ಹೆಸರಲ್ಲಿ ನೈಸರ್ಗಿಕ ,ಪ್ರಕೃತಿಯಿಂದ ದೂರವಿಡುತ್ತಿದ್ದಾರೆ. ಮಗುವಿಗೆ ನೈಸರ್ಗಿಕವಾಗಿ ದೊರಕುವ ಶಕ್ತಿ, ಸಂಬಂಧ, ಬದುಕುವ ಕಲೆ, ಸಾಮಾಜಿಕ ನಿಷ್ಠೆ, ವಿದ್ಯೆಯಿಂದ ದೂರವಿಟ್ಟು, ಅವರನ್ನು ಬಾವಿಯ ಕಪ್ಪೆಗಳನ್ನಾಗಿಸುತ್ತಿದ್ದಾರೆ.

         ತಾಯಿಯ ಸ್ತನ ಪಾನ ಮಾಡಿದ ಮಗುವಿಗೆ ಮಾತ್ರ ತಾಯಿಯ ಮಮತೆಯ ಅರಿವಾಗುತ್ತದೆ. ತಾಯಿಯ ಎದೆ ಹಾಲು ಕುಡಿಯುವುದು ಕೇವಲ ಹೊಟ್ಟೆ ತುಂಬುವುದಕ್ಕಲ್ಲ. ದೇವರಿತ್ತ ನೈಸರ್ಗಿಕ ಬಳುವಳಿ, ಶಕ್ತಿ ಮತ್ತು ನಿರೋಧಕ ಶಕ್ತಿ ವರ್ಧಕ. ಮಾತೃ ,ವಾತ್ಸಲ್ಯ, ಸಂಬಂಧಗಳ ಜ್ಯೋತಕ. ಆದರೆ ಸೌಂದರ್ಯ, ಆಧುನಿಕತೆಯ ಹೆಸರಲ್ಲಿ ತಾಯಿಯೇ ತನ್ನ ಮಗುವಿಗೆ ಮೋಸ ಮಾಡುವ ದಿನ ಬಂದಿದೆ. ಹಾಲು ಕೊಡುವುದನ್ನು ಬಿಟ್ಟು, ಯಾವುದೋ ಪ್ರಚಾರದ ಅಬ್ಬರದ ಆಹಾರವನ್ನು ಮಗುವಿಗಿತ್ತು, ಮಗುವಿನ ದೇಹ ಗುಂಡಗಾಗಿಸಿ, ಜೀವ ಅಸಾಮರ್ಥ್ಯವಂತರಾಗಿ, ಖುಷಿಯ ಯವ್ವನದ ದಿನಗಳಲ್ಲಿಯೇ , ದೇಹವು ರೋಗ, ನಿರಾಸಕ್ತಿಯ ಗೂಡಾಗಿಸುತ್ತಿದ್ದಾರೆ. ಈ ಸಾಮಾಜಿಕ ರೋಗದಿಂದ, ಸಮಾಜ ದಿಕ್ಕು ಕಾಣದ ಕಗ್ಗತ್ತಲಿನತ್ತ ಸಾಗುತ್ತಿದೆ.

          ಅದಕ್ಕಾಗಿ ಹುಟ್ಟಿಸಿದ ದೇವ ಹುಲ್ಲು ಮೇಯಿಸಲಾರ ಎಂಬ ನಾಡ್ಣುಡಿ ಹುಟ್ಟಿದ್ದು. ಅರ್ಥಾತ್ ಪ್ರತಿ ಜೀವಿಗೂ ದೇವನು ಬದುಕುವ, ಬದುಕನ್ನು ಗಟ್ಟಿಯಾಗಿಸುವ ಶಕ್ತಿ ನೀಡಿದ್ದಾನೆ.ಪ್ರತಿ ಜೀವಿ ತನ್ನ ತಪ್ಪುಗಳಿಂದಲೇ, ಸ್ವಯಂಕೃತರಾಗಿ ತೊಂದರೆಗೆ ದೂಡಿ ಕೊಂಡರೆ ದೇವರ ತಪ್ಪಲ್ಲ. ಇಂತಹ ಸ್ವಯಂ ಅಪರಾಧಗಳಿಗೆ ಅನುಭವಿಸುವುದು, ಅದರಿಂದ ಬುದ್ಧಿ ಕಲಿತು ಸುಧಾರಿಸಲು ಅವಕಾಶ ಇದ್ದೇ ಇರುತ್ತದೆ. ಅದನ್ನು ಮರೆತರೆ, ದೇವರೇ ನಿರ್ಣಯಿಸುತ್ತಾನೆ, ಆ ಜೀವಿಯ ಜೀವನದ ದಿನಗಳನ್ನು.....

Comments

Popular posts from this blog

ಜೀವನ ಬಹಳ ಸರಳ..

"ಕರ್ಮ" ಭೂಮಿ ಭಾರತ

ಹಾಲಾಡಿ ಹಬ್ಬ