"ಕರ್ಮ" ಭೂಮಿ ಭಾರತ

 


ಅಖಂಡ ಭಾರತವು ಒಂದು "ಕರ್ಮ" ಭೂಮಿ. ಇಲ್ಲಿನ ಮಣ್ಣಿನ ಮೂಲ ಬೇರು "ಹಿಂದೂ" ಧರ್ಮವೆಂಬ ಕರ್ಮ ಆಧರಿದ ಜೀವನ ಕ್ರಮ. ಈ ಜೀವನ ಪದ್ಧತಿಯಲ್ಲಿ ,"ಜಾತಿ-caste" ಎಂಬ ಪದವೇ ಇಲ್ಲ.ಎಲ್ಲರೂ ಸಮಾನರು,ಆದರೆ ಅವರು ಅನುಸರಿಸುವ ಕರ್ಮ/ಕಾರ್ಯಗಳಿಂದ ನಾಲ್ಕು ವಿಭಾಗದಲ್ಲಿ ಗುರುತಿಸಲ್ಪಡುತ್ತಿದ್ದರು.ಅವುಗಳನ್ನು ವರ್ಣಗಳೆಂದು ಗುರುತಿ ಸಲ್ಪಡುತ್ತಿತ್ತು.ಎಲ್ಲವೂ ಮುಕ್ತಿಗಾಗಿ, ದೇವರ ಅನುಗ್ರಹಕ್ಕಾಗಿ ಆರಿಸಿಕೊಂಡ ಗೌರವಯುತ  ಮಾರ್ಗಗಳಾಗಿದ್ದವು. "ವಸುದೈವ ಕುಟುಂಬ"ವೆಂಬ ಪರಿಕಲ್ಪನೆ ಇತ್ತು.ಯಾರೂ ಯಾವ ಸಮಯದಲ್ಲಿಯೂ ತನ್ನ ಆಯ್ಕೆಯ "ಕರ್ಮ"ದಲ್ಲಿ ಮುಂದುವರಿಯುವ ಮುಕ್ತತೆ ಇತ್ತು.

ಆದರೆ ಯಾವಾಗ ಬ್ರಿಟಿಷರು, ಪೋರ್ಚುಗೀಸರು ಈ ನೆಲದಲ್ಲಿ ಕಾಲಿಟ್ಟರೋ, ಅವರು ತಮ್ಮ ಲಾಭಕ್ಕಾಗಿ, ವರ್ಣ ವ್ಯವಸ್ಥೆಯನ್ನು ತಿರುಚಿ, ಅವರ ಅನುಕೂಲಕ್ಕಾಗಿ ಜಾತಿ ವ್ಯವಸ್ಥೆಯೆಂಬಂತೆ ನಿಧಾನವಾಗಿ ಮಾರ್ಪಡಿಸಿದರು. ಮೇಲ್ವರ್ಗ ,ಕೆಳವರ್ಗವನ್ನು ಸೃಷ್ಟಿಸಿ ಅದನ್ನು ಜಾತಿ ಹೆಸರಲ್ಲಿ ಶ್ರೇಣೀಕೃತಗೊಳಿಸಿದರು.

"Casta" ಎನ್ನುವ ಪೋರ್ಚುಗೀಸರ "ರಕ್ತ ಸಂಬಂಧ" ಎನ್ನುವ ಪದವನ್ನು, ಜಾತಿಯ ವ್ಯವಸ್ಥೆಯ ಅರ್ಥದಲ್ಲಿ ರೂಪಾಂತರಗೊಳಿಸಿ, ನಮ್ಮ ಜನರಲ್ಲಿ ಭೇದ ,ದ್ವೇಷದ ಕಂದಕ ಸೃಷ್ಟಿಸಿ ತಮ್ಮ ಪಿತೂರಿಯ ಭಾಗವಾಗಿಸುವಲ್ಲಿ ಸಫಲತೆ ಕಂಡರು.

ಇದರ ಭಾಗವಾಗಿ, ಆಗಿನ ಕೆಲವು ಮುಂದುವರಿದ ಜನಾಂಗದ ಜನರನ್ನೆ ಆಯ್ದು, ಅವರ ಸ್ವಾರ್ಥ ಬುದ್ಧಿಯನ್ನು ಉಪಯೋಗಿಸಿ, ದೇಶವನ್ನು ನಿರಂತರವಾಗಿ ಒಡೆದು ಆಳುವಲ್ಲಿ ಸಫಲರಾಗಿದ್ದಾರು. ಅದೇ ಆ ಗುಂಪಿಗೆ ಮುಂದೆಯೂ ಪಾಶ್ಚಾತ್ಯ ರಾಷ್ಟ್ರಗಳ ನಿರ್ದೇಶಿತ,ಭಾರತವನ್ನು ಆಳಿದ ಸ್ವಾರ್ಥ ನಾಯಕರ, ಬೆಂಬಲ ಸಿಕ್ಕಿ,ಭವ್ಯ ಭಾರತದ ಬೆಳವಣಿಗೆಗೆ ಅಡ್ಡವಾಗಿ ಕಾಡುತ್ತಿರುವುದಂತೂ ಸತ್ಯ.

ವೇದಗಳಲ್ಲಿ ವರ್ಣ ವ್ಯವಸ್ಥೆಯು, ಪ್ರತಿಯೊಬ್ಬರ ಜೀವನ ಕರ್ಮಗಳಿಂದ ಗೌರವವಾಗಿ ಗುರುತಿಸಲ್ಪಟ್ಟರೆ, casta ಎಂಬ ಪಾಶ್ಚಾತ್ಯ ಪದದಿಂದ ಹುಟ್ಟಿದ "caste" ಶಬ್ದ, ರಕ್ತ ಸಂಬಂಧಿ ಎಂಬ ಅರ್ಥ ಹೊಂದಿದ್ದು,ಮುಂದೆ ಮುಂದೆ ವಯಕ್ತಿಕ, ಸ್ವಾರ್ಥ...ಸ್ವ ಅರ್ಥ, ಸ್ವಂತ ಹಣದ ಲಾಭಕ್ಕೆ ಮಾಡಿಕೊಂಡ ಗುಂಪಿನ "ಜಾತಿ" ಎಂಬ ಪರ್ಯಾಯ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಆ ಮೂಲಕ ಸಮಾಜವನ್ನು ಈ ನೆಲೆಯಲ್ಲಿ ಒಗ್ಗೂಡದಂತೆ ಮಾಡುವ ತೆರೆಯ ಮರೆಯ ಹೋರಾಟದಲ್ಲಿ ಯಶಸ್ಸು ಕಂಡರು ಮತ್ತು ಈ ದೇಶದ ಅವನತಿಗೆ ಕಾರಣರಾದರು. ಆದರೆ ಇದರಲ್ಲಿ ಪಾಶ್ಚಿಮಾತ್ಯ ವಿದ್ಯೆಗಳಿಂದ, ಅವರ ಸ್ವಾರ್ಥ ಲಾಲಚೆಗಳಿಂದ ಆಕರ್ಷಣೆಗೊಂಡ, ಕರ್ಮ ನಿಷ್ಠೆ ಇಲ್ಲದ ಕೆಲವು ಬೆರಳೆಣಿಕೆಯಷ್ಟು ಜನರು ಕಾರಣವೆನ್ನುವುದು ಅಷ್ಟೇ ಸತ್ಯ.

ಭಾರತಕ್ಕೆ ಇಂತಹ ಅರ್ಥಹೀನ ವ್ಯವಸ್ಥೆಗಳಿಂದ ಮುಕ್ತಿ ಬೇಕು. ಕಾಯಕವೇ ಜೀವನ ಮತ್ತು ಪ್ರತಿ ಕರ್ಮವೂ ಗೌರವಯುತ ಎನ್ನುವ ಮಾರ್ಗ ಬೇಕು.

Comments

Popular posts from this blog

ಸತ್ಯ..

ಚಿಟ್ಟೆ..

ಹೇಳಲಾರದ ಮಾತುಗಳು