ಸತ್ಯ... ಮಿಥ್ಯೆ..
ಸತ್ಯ ಮುಚ್ಚಿಟ್ಟಸ್ಟೂ ಮಂಕಾಗುತ್ತದೆ. ಮಿಥ್ಯೆ ಹೊರಗಡೆದಷ್ಟೂ ಶುದ್ಧವಾಗುತ್ತದೆ. ಸತ್ಯ ಒಪ್ಪದ ಮನಸ್ಸು, ಕ್ಷೋಭೆಯಿಂದ ಬಡಬಡಿಸುತ್ತವೆ,ಅರೆ ಬೆಂದ ಅನ್ನ ತಿಂದು, ಗಂಟಲಲ್ಲಿ ಸಿಕ್ಕಿ ಒದ್ದಾಡಿದಂತೆ.
ಸತ್ಯ ಒಪ್ಪುವುದು ಅಷ್ಟು ಸುಲಭವಲ್ಲ. ಸತ್ಯ ಅರಗಿಸಲು ಕಷ್ಟ, ಮಥಿಸಿ ಮನನ ಮಾಡಲು ಸಾವಧಾನ ಬೇಕು...ಮನಸ್ಸಿಗೆ ನೆಮ್ಮದಿ ಬೇಕು.
ಸತ್ಯ ಸಾಯದು,...ಅರಗಿಸಲಾಗದ ಅತೃಪ್ತ ಆತ್ಮಗಳ ಬಡಬಡಿಕೆಗೆ ಸತ್ಯ ನಾಶವಾಗದು..ಸತ್ಯವನ್ನು ಸಂಶೋಧಿಸಿ, ಸದಾ ಅರಗಿಸಿಕೊಳ್ಳುವ ಪ್ರತಿಭೆ ಮತ್ತಷ್ಟು ಬೆಳೆಯುತ್ತದೆ......
Comments
Post a Comment