ಜೀವನದ ಓಟ...
ಜೀವನದ ಓಟ...
ನಮ್ಮ ಕಣ್ಣೆದುರೇ ಮಕ್ಕಳು ಆಟವಾಡಿ, ಕುಣಿದುದನ್ನು ಕಣ್ತುಂಬಿಕೊಂಡು, ಸಂತಸದ ದಿನ ಕಳೆದಾಗ ದಿನ ಚಿಕ್ಕದಾಗಿತ್ತು. ಹಾಗೆಯೇ ನಮ್ಮ ಪ್ರಾಯ ಕಳೆದದ್ದು ತಿಳಿಯಲೇ ಇಲ್ಲ.
ಅದೇ ಮಕ್ಕಳು ದೊಡ್ಡವರಾಗಿ ,ರೆಕ್ಕೆ ಬಲಿತು ಹಾರುವುದನ್ನು , ಎಲ್ಲರಲ್ಲೂ ಹಂಚಿ ಸುಖಪಟ್ಟಾಗ ದಿನ ಕಳೆದದ್ದು ತಿಳಿಯಲೇ ಇಲ್ಲ. ವರುಷ ಚಿಕ್ಕದೆನಿಸಿತ್ತು.
ಆದರೆ ಹಾರಿದ ಹಕ್ಕಿ ಬೇರೊಂದು ಗೂಡು ಕಟ್ಟಿ ಕಣ್ಣಿಗೆ ಕಾಣದಾಗ, ಪ್ರಾಯ ಮುಗಿ ಬಿದ್ದಿತು. ಕಣ್ಣು ಮಂಜಾಗಿ, ಮನಸ್ಸು ಮುಪ್ಪಿನೆಡೆ ಸಾಗಿ, ಕ್ಷಣವೂ ಯುಗವೆಸತೊಡಗಿತು.
ಅದೇ ಜೀವನದ ಸುದೀರ್ಘ ಬಾಳ್ವೆ ಎಂಬ ಕಟು ಸತ್ಯ, ಮಬ್ಬಿನಲಿ ದೀಪವಾಗಿ ಕುಕ್ಕುವುದು ತಪ್ಪಲಿಲ್ಲ
Comments
Post a Comment