ಜೀವನ ಯಾತ್ರೆ
ಜೀವನವನ್ನು ಯಾತ್ರೆಗೆ ಹೋಲಿಸಿದ್ದಾರೆ. ಅಂದರೆ ಎಲ್ಲಾ ಏಳು ಬೀಳುಗಳನ್ನು ದಾಟಿ ,ಮೋಕ್ಷದ ಗುರಿಯೆಡೆಗೆ ನಡೆಯುವುದೇ ಬದುಕು. ದಾರಿಯಲ್ಲಿ ಸಿಗುವ ಮುಳ್ಳು, ಸೌಂದರ್ಯ ಎಲ್ಲವನ್ನೂ ಲೆಕ್ಕಿಸದೇ ಸಾಗಬೇಕು. ನಾವು ಕಳೆದ ಸುಂದರ, ತೃಪ್ತಿಪೂರ್ಣ ದಿನಗಳು ಮಾತ್ರ ಸ್ಮೃತಿ ಪಟದಲ್ಲಿ ಉಳಿಯಲಿ.
ಮುಂದಿನ ದಿನದ ನಡೆಯ ಬಗ್ಗೆ ಗುರಿ ಇರಲಿ, ಭಯ ಬೇಡ. ನಡೆಸಿದಂತೆ, ದಾರಿ ಎದುರಾದಂತೆ ನಡೆವುದು ಅನಿವಾರ್ಯ.
ಭವಿಷ್ಯದ ದಾರಿ ಬಗ್ಗೆ, ಅನಾವಶ್ಯಕ ಹೆದರಿಕೆ ಬೇಡ. ಅದು ಮನಸ್ಸಿನ ಹುಮ್ಮಸ್ಸು ಕುಗ್ಗಿಸಬಹುದು. ಎದುರಿಸುವ ಸಂಕಲ್ಪ ಮತ್ತು ಅದನ್ನು ಸ್ವೀಕರಿಸಿ ಮುನ್ನಡೆವ ಮನೋಬಲ ಮಾತ್ರ ಇರಲಿ.
Comments
Post a Comment