ಖುಷಿ

 ನೀವಾಡುವ ಸಣ್ಣ ಸಣ್ಣ ಖುಷಿಯ ಮಾತುಗಳು, ಮುಖದ ಮೇಲಿನ ಮುಗುಳ್ನಗೆ, ಎಷ್ಟೊ ದುಃಖ ತುಂಬಿದ ಹೃದಯಕ್ಕೆ ಖುಷಿ ಮತ್ತು ಉತ್ಸಾಹ ಮೂಡಿಸಬಹುದು. ಇನ್ನೊಬ್ಬರ ಹೃದಯದ ನೋವು ಮರೆ ಮಾಡಲು ,ಸಂತಸ ತುಂಬಲು, ಒಂದೆರಡು ಸವಿ ಮಾತುಗಳು ಮಾತ್ರ ಸಾಕು.

ನಾವೇಕೆ ಸಂತಸ ಹಂಚಿ, ಸಂತಸ ಪಡೆಯಬಾರದು. ಒಂದೆರಡು ಮಾತೇ ಹತ್ತಾರು ಗಂಟೆ ಮನಸ್ಸಿಗೆ ಮುದ ಕೊಡುವುದಂತಾದರೆ, ಜೀವನವನ್ನು ಖುಷಿ ಖುಷಿಯಿಂದ ಕಳೆಯಲು ಸುಂದರವಾದ ನೂರಾರು ಮಾತುಗಳೇ ಸಾಕು. ಪ್ರೋತ್ಸಾಹಕರ ನಾಲ್ಕು ನುಡಿ ,ಎಷ್ಟೋ ಜನರ ಬಾಳು, ಭವಿಷ್ಯ ಉಜ್ವಲಗೊಳಿಸಿದ ಉದಾಹರಣೆ ಇವೆ. ಮನ ಬಿಚ್ಚಿ ಸಂತಸ ಹಂಚುವುದು ಒಂದು ಕಲೆ...ನಾವೂ ರೂಡಿಸಿಕೊಳ್ಳೋಣ.

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು