ದೇಶದ ಸ್ವಾತಂತ್ರ್ಯ

 ದೇಶದ ಸ್ವಾತಂತ್ರ್ಯ ಎನ್ನುವುದು, ಸ್ವೇಚ್ಛಾಚಾರಕ್ಕೆ ಸಿಕ್ಕಿದ ಅನುಮತಿಯಲ್ಲ.

ತನ್ನ ಹೊತ್ತ ನೆಲ, ಅನ್ನ ಕೊಟ್ಟ ದೇಶ, ಸಂಸ್ಕಾರ ಸಂಸ್ಕೃತಿ ತುಂಬಿದ ಪರಿಸರವನ್ನು ಗೌರವಿಸಿ,  ಸಾಮರಸ್ಯದಿಂದ ಬದುಕು ಕಟ್ಟಿ ಕೊಳ್ಳುಲು ದೊರೆತ ಅವಕಾಶ.

ಆದರೆ ಯಾವುದೋ ಲಾಭ, ಮೋಹ, ಸ್ವಾರ್ಥಕ್ಕಾಗಿ, ಹೆತ್ತು ಬೆಳಿಸಿದ ತಾಯ್ನೆಲವನ್ನು ,ಕರುಳ ಕುಡಿಯೇ ಧೂಷಿಸುವುದು, ನಿಂದಿಸುವುದು ಅಕ್ಷಮ್ಯ ಅಪರಾಧ.

 ತಾಯಿಯ ಕರುಳ ಬಳ್ಳಿ ಹರಿದು ಹೊರಬಂದುದನ್ನೆ, ಸ್ವಾತಂತ್ರ್ಯ ದೊರಕಿದೆ ಎನ್ನುವ ನೆಲೆಯಲ್ಲಿ, ಮಂದ ಬುದ್ಧಿಯಿಂದ ಹೆತ್ತಬ್ಬೆಯ ಕರುಳಿಗೆ ಚೂರಿ ಹಾಕುಲು ಸಾಧ್ಯವಿಲ್ಲ.

ತಪ್ಪು ಒಪ್ಪುಗಳ ನಡುವೆ ಹೊಂದಿ ಬೆಳೆದು, ಬೆಳೆಸುವ ಗುಣ ಬೆಳೆಸಿಕೊಂಡು, ದೇಶವನ್ನು ಕಟ್ಟಿ ಬೆಳೆಸುವುದು ಮಾತ್ರ ದೇಶ ಭಕ್ತಿಯ ಪ್ರತೀಕವಾಗುತ್ತದೆ.

Comments

Popular posts from this blog

ಜೀವನ ಬಹಳ ಸರಳ..

"ಕರ್ಮ" ಭೂಮಿ ಭಾರತ

ಹಾಲಾಡಿ ಹಬ್ಬ