ನಂಬಿಕೆಯೇ ಇಂಬು ..

 ಹೃದಯ ಉರಿ ಹೊತ್ತು ಕರಟಿ ಕಣ್ಣೀರಿಳಿದಾಗ,.

.

.

 ತಂಗಾಳಿ ಬೀಸಿ,ಬಿಸಿ ಮನಸ್ಸು ತಂಪಾಗಿಸಿತಲ್ಲ.

ತುಂತುರು ಹನಿ ಮಳೆ,  ಕಣ್ಣೀರ ತೊಯ್ದು ಮರೆಮಾಚಿತಲ್ಲ.

ಪಲ್ಲವಿಸಿದ ಪುಷ್ಪ ಸುವಾಸನೆ, ಕರಟಿದ ಹೃದಯದ ವಾಸನೆಯ ಕರಗಿಸಿತಲ್ಲ.

ಮತ್ತೆ ಯಾರು ದೇವನಿಲ್ಲವೆಂದು ಕನವರಿಪರು.

ಮೂಢನಾಗದಿರು, ನಂಬಿಕೆಯೇ ಇಂಬು ಕೊಡುವುದು ಬಾಳ ಹಾದಿಯಲಿ.

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು