ದೂರ ಪಯಣ ಹಾದಿ ..
ಮನುಷ್ಯನ ಸುಖ ಕಷ್ಟಗಳೆನ್ನುವುದು, ಲಾಭ ನಷ್ಟಗಳ ಲೆಕ್ಕಾಚಾರ . ಸಾಮಾನ್ಯವಾಗಿ ಮನುಷ್ಯನ ಆಲೋಚನೆಯಂತೆ ಇವುಗಳು ಸಮಾನುಪಾತವಾಗಿರುತ್ತವೆ. ಬಾಹ್ಯ ತಿಳುವಳಿಕೆಗೆ ಹೌದೆಂದು ಭೃಮಿಸಿದರೂ, ವಾಸ್ತವವಾಗಿ ಅವು ಒಂದಕ್ಕೊಂದು ವಿಲೋಮಾನುಪಾತವಾಗಿರುತ್ತದೆ.
ಅಂದರೆ ಆರ್ಥಿಕ ಮತ್ತು ಭೌತಿಕ ಲಾಭವೆನ್ನುವುದು ನೇರವಾಗಿ ಮಾನಸಿಕ ಹಾಗೂ ದೈಹಿಕ ಪ್ರತಿಕೂಲಗಳನ್ನು, ಅರಿವಿಲ್ಲದಂತೆ ಹೇರುತ್ತದೆ.
ಆದರೆ ಕಷ್ಟ ಎನ್ನುವಲ್ಲಿ ಮನಸ್ಸನ್ನು ಒರೆಗೆ ಹಚ್ಚಿ,ಮಾನಸಿಕ ಹಾಗೂ ದೈಹಿಕ ಚಟುವಟಿಕೆಗೆ ಪ್ರೇರೇಪಿಸುತ್ತದೆ...
ಈ ಹೋರಾಟದ ಪ್ರತಿ ಸಫಲತೆಯೂ,ಒಂದು ಮಾನಸಿಕ ಸಂತಸ ಮತ್ತು ಇನ್ನಷ್ಟು ಚಟುವಟಿಕೆಗೆ ಅನುವು ಮಾಡಿಕೊಡುತ್ತದೆ. ಇದುವೇ ಮನುಷ್ಯನ ಆರೋಗ್ಯದ, ನೆಮ್ಮದಿಗೆ ತಳಹದಿ ಆಗುತ್ತದೆ.
ಅದನ್ನೆ ಕಾಯಕವೇ ಕೈಲಾಸ ಎಂದು ಬಣ್ಣಿಸಿರುವುದು. ಖಾಲಿಯಾದ ಮನಸ್ಸು ಮತ್ತು ದೇಹ, ಭೂತಗಳ ವಾಸ ಸ್ಥಾನ.
ಹೊತ್ತು ಸಾಗುವ ಮೂಟೆ, ಬೆವರಿಂದ ಕಣ್ಣೀರ ಸುರಿಸೀತು...ಕಣ್ಣೀರ ಪನ್ನೀರ ಶುದ್ಧದಿಂದಲಿ ದೃಷ್ಟಿ ಸ್ಪಷ್ಟತೆಯೆ ದೂರ ಪಯಣ ಹಾದಿ ಸುಗಮವಾದೀತು.
Comments
Post a Comment