ತೊದಲು ನುಡಿ ...
ತೊದಲು ನುಡಿ ಕಲಿಯಲು ಮಗು ಒಂದೆರಡು ವರ್ಷ ತೆಗೆದುಕೊಂಡರೂ.....
ಮಾತು ಕಲಿಯಲು ಹತ್ತಾರು ವರ್ಷಗಳೇ ಬೇಕು...
ಕಾಲ ಕಳೆದಂತೆ ,ಮಾತು ಮಾತಾಗಿರದೇ ಅದು ಮುತ್ತಾಗಬೇಕು.
ಮಾತೇ ಮಾಣಿಕ್ಯ ವಾಗಬೇಕು.
ಮಾತಿನ ತೂಕ ಹೆಚ್ಚಾಗುತ್ತಾ ಹೋಗಬೇಕು.
ನಮ್ಮ ಮಾತು, ನಮ್ಮ ಗೌರವದ ಜ್ಯೋತಕವಾಗಬೇಕು..
ನಮ್ಮ ಮಾತಿಂದ ಸಮಾಜ ನಮ್ಮನ್ನು ಗುರುತಿಸುವಂತಾಗಬೇಕು..
ಇರುವುದೊಂದೇ ನಾಲಗೆ...ಒಂದೇ ಮಾತಾಗಬೇಕು.
ಆದರ್ಶದ ಜೀವನದ ಅಡಿಪಾಯ ನಿರ್ಧರಿಸುವುದೇ, ಈ ನಮ್ಮ ಮನ ತುಂಬಿದ ಮಾತು...
ಜಾಗರೂಕರಾಗಿ ಮಾತಾಡೋಣ.
Comments
Post a Comment