ನಿರಂತರ ಸತ್ಯ.
ಜೀವನದ ಸುಖ, ಕಷ್ಟಗಳನ್ನು ತುಲನಾತ್ಮಕವಾಗಿ ನೋಡಬೇಡಿ.
ಸಂತಸ, ಸಂಕಷ್ಟಗಳು
ಭಾಗ್ಯ,ಬವಣೆಗಳು
ಮೇಲು,ಕೀಳುಗಳು
ಬಡತನ,ಸಿರಿತನಗಳು
ಸೌಭಾಗ್ಯ, ದುರ್ಲಭಗಳು....
ಜೀವನದ ತುಲಾ ಮಾಪನದ ಸಮಷ್ಟಿಯಲ್ಲಿ ಸಮತೋಲಿತ.
ಒಂದು ಕಡೆ ಭಾರವೆನಿಸಿದರೆ ಅದು ನಂತರದಲ್ಲಿ ಕಡಿಮೆಯಾಗಿ, ಇನ್ನೊಂದು ಕಡೆ ಸರಿವ ಸೂಚನೆಯಷ್ಟೆ.
ಸಮ ಚಿತ್ತ, ಸಮ ಭಾವ...ನಿರಂತರ ಸತ್ಯ.
Comments
Post a Comment