ಮೇಘನೊಡ್ಡೋಲಗ
ಮೋಡ ತುಂಬಿದ ಭಾನು
ಚಂದಿರನ ಸುಳಿವಿಲ್ಲ
ಮರೆಗೆ ಸರಿದಿಹನೆ ?
ಕಾರ್ಮುಗಿಲ ಸೀಳಿ,
ತುಂತುರ ಚೆಲ್ಲಿ ಇಣುಕಬಾರದೇನೊ.
ಆಗಸದಿ ಮೇಘರಾಜನ ಒಡ್ಡೋಲಗ,
ಕಣ್ಸೆಳವ ಬೆಳಕಿನಾಟ.
ತರಿಸದೇ ಇರಲಾರ ತುಂತುರು, ಕಾದ ಇಳೆಗೆ.
ಮನದ ತಿಳಿಗೊಳದಿ
ನಲಿಲಾಡುವ ಕನಸಿನ ಹಂಸ.
ತೇಲುತಿಹ ಬಿಳ್ನಗುವ ದುಂಡು ಶಶಾಂಕ
ಮೀಟದಿರನೆ ಇನಿದನಿ.
ಮಿನುಗುತಿವೆ ನೂರಾರು ತಾರೆಗಳ ಮಾಲೆ.
ಮಳೆಯ ಸಿಂಚನದಿ ತಂಪಾಯ್ತು ಧರೆ,
ಹೊಸ ಹಸಿರು,ಜೀವಕಳೆ.
ಮತ್ತೆ ಕಾಯುತಿವೆ ಮರಳಿ ಮೇಘನೊಡ್ಡೋಲಗ.
Comments
Post a Comment