ನಾಳೆ...
ನಾಳೆಯೆಂಬ ದಿನದೆಡೆಗೆ ಭರವಸೆಯ ಬದುಕು ಇರಲಿ.
ಆಸೆ ,ನಿರೀಕ್ಷೆಗಳ ಸಂಘರ್ಷದ ಬಾಳು ಬಾರದಿರಲಿ.
ದಕ್ಕಿದ ದಿನದ ಬಗ್ಗೆ ಸಮಾಧಾನವಿರಲಿ.
ಕಳೆದುಳಿದ ಜೀವನದಲಿ ನೆಮ್ಮದಿ ಇರಲಿ.
ಇಲ್ಲದಿರುವುದ ಬಗ್ಗೆ ಹಂಬಲಿಸಿ ಮಂಕಾಗುವುದು ಬೇಡ..
ಸಿಕ್ಕಿದ ದಿನಗಳ ಬಗ್ಗೆ ಸಂತೃಪ್ತಿ ಬೇಕು.
ನಾಳೆ ಎನ್ನುವ ಬಗ್ಗೆ ಭ್ರಾಂತಿ ಬೇಡ.
ನಾಳೆಯು ಇಂದಾಗಿ, ನಿನ್ನೆ ಆಗುತ್ತದೆ ಎನ್ನುವ ವಾಸ್ತವ ಅರಿಯಬೇಕು.
ವರ್ತಮಾನವೇ ಸತ್ಯ, ನಿತ್ಯ.
ಸಾಗುತಿರಲಿ ಜೀವನದ ಒಂದೊಂದೆ ಕ್ಷಣ ಅನುಭವಿಸಿ,
ನೆಮ್ಮದಿ ಸುಖವನುಂಡು .
ಪಡೆದುದನ್ನೆ ಗುರುತಿಸಿ, ಸಂತಸ ಹೊಂದುವುದು ಮುಖ್ಯ..!!
Comments
Post a Comment