ಖುಷಿ
ನಿನ್ನ ಅಸಹಾಯತೆ ಸಮಾಜದ ಮುಂದಿಡಬೇಡ.... ಅದರ ದುರುಪಯೋಗ ಮತ್ತು ಶೋಷಣೆ ಮಾಡುವ ಹತ್ತಾರು ಜೀವಿಗಳು ನಿನ್ನ ಸುತ್ತ ಕಾಯುತ್ತಿರುತ್ತವೆ...ಹಾಗೆಯೇ ನಿನ್ನ ನಿರ್ಧಿಷ್ಟ ವಿಷಯದ ಪ್ರಭಲತೆಯನ್ನು ಜನರಿಗೆ ತಿಳಿಸುವಲ್ಲಿಯೂ ಹಿಂಜರಿಕೆ ಬೇಡ. ಅದು ನಿನಗೆ ಮತ್ತು ನಿನ್ನ ಸುತ್ತಲಿನವರಿಗೆ ರಕ್ಷಣೆಯ ಕವಚ ನೀಡುತ್ತದೆ.....
ಜೀವನದಲ್ಲಿ ಖುಷಿ ಹಂಚುವುದೂ ಒಂದು ಧನಾತ್ಮಕ ಕಲೆ. ಮನಸ್ಸಿನ ಸಂತೃಪ್ತಿಯನ್ನು ಮಾತ್ರ ಹೊರಗೆಡಹಿ, ಇತರರೂ ಅದನ್ನು ಗ್ರಹಿಸಿ,ಅದರಿಂದ ಧನಾತ್ಮಕವಾಗಿ ಪ್ರೇರಣೆಗೊಂಡರೆ, ಇಡೀ ಸಮಾಜ ಸ್ವಾಸ್ಥ್ಯವಾಗಿರುತ್ತದೆ. ಎಷ್ಟೋ ಮನೆಗಳು,ಮನಗಳು ಸುಖ, ಸಂತಸದ ನೆಮ್ಮದಿ ಯ ಬಾಳ್ವೆ ಪಡೆಯಬಹುದು.
#ಎಲ್ಲರೂ ಖುಷಿ ಹಂಚಿ,ಖುಷಿ ಖುಷಿಯಂಗೆ ಇರಿ.
Comments
Post a Comment