ಜೀವನದ ಸಂತಸ
ಬೆಳದಿಂಗಳ ಮಧ್ಯದ ತಂಗಾಳಿ,ಮನವರಿವ ಹೃದಯಗಳ ನಸು ನಗು ಸಾಲದೆ ಜೀವನದ ನೆಮ್ಮದಿಗೆ?
ಜಗ ಜಗಿಪ ಕೃತಕ ದೀಪಗಳು ಉದ್ದಿಪನಗೊಳಿಪ, ಕ್ಷಣಿಕ ಅತಂತ್ರ ಸ್ಥಿತಿಗಳೇ ಮನದ ಅಸ್ಥಿರತೆಯ ಬೀಜವಾಗದಿರಲಿ.
ಮನೋಲ್ಲಾಸವೇ ಮುಖ್ಯ ,ಕಳೆವ ದಿನಗಳಿಗೆ.
ಕೃತಕ,ಕೃತಿಮಗಳು ಅಗ್ನಿ ಶರಗಳಾಗಿ ಚುಚ್ಚಿ, ನೆಮ್ಮದಿ, ಸಂತಸವ ದಹಿಸುತ್ತಾ ,ನರಕದೆಡೆಗಿನ ದಾರಿ ಪಲಕವಾಗದಿರಲಿ.
ಪ್ರಸ್ತುತ ಜೀವನದ ಸಂತಸ, ನೆಮ್ಮದಿಯುತ ಕಳೆವ ದಿನಗಳೆ, ಮುಂದಿನ ಸವಿ ನೆನಪುಗಳ ಆಗರವಾಗಿ, ಅಂತಿಮ ದಿನಗಳ ಸುಂದರ ಬದುಕಿನ ತಳಹದಿಯಾಗಲಿ.
Comments
Post a Comment